ನಾಗಮಂಗಲ (ಮಂಡ್ಯ ಜಿಲ್ಲೆ): ಕರ್ನಾಟಕದ ಬಾಲಕಿಯರ ತಂಡವು ಇಲ್ಲಿನ ಆದಿಚುಂಚನಗಿರಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 19 ವರ್ಷದೊಳಗಿನ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 34-20ರಿಂದ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿದರು.

ಮತ್ತೊಂದು ಪಂದ್ಯದಲ್ಲಿ ಛತ್ತೀಸ್‌ಗಡ ತಂಡ 34-33ರಿಂದ ಹಿಮಾಚಲ ಪ್ರದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದರೆ, ರಾಜಸ್ಥಾನ ತಂಡವು 33-23 ಅಂತರದಲ್ಲಿ ದೆಹಲಿ ವಿರುದ್ಧ, ಹರಿಯಾಣ ತಂಡವು 43-20 ಅಂತರದಲ್ಲಿ ತಮಿಳುನಾಡು ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದೆಹಲಿ ತಂಡವು 41-28 ಅಂತರದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ, ವಿದ್ಯಾಭಾರತಿ ತಂಡವು 40-25 ಅಂತರದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಗೆಲುವು ಪಡೆಯಿತು.

ಹರಿಯಾಣ ತಂಡವು 53-31 ಅಂತರದಲ್ಲಿ ಕರ್ನಾಟಕದ ವಿರುದ್ಧ, ರಾಜಸ್ಥಾನ ತಂಡವು 40-27 ಅಂತರದಲ್ಲಿ ಸಿ.ಬಿ.ಎಸ್.ಇ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.