ಕಿಕ್ಕೇರಿ: ‘ಓದಿನಷ್ಟೆ ಲೌಕಿಕ ಜ್ಞಾನ ಮುಖ್ಯವಾಗಿದ್ದು, ಎಳೆಯ ವಯಸ್ಸಿನಲ್ಲಿ ಮಕ್ಕಳು ಸಣ್ಣಪುಟ್ಟ ವ್ಯಾಪಾರ, ಕೊಡು– ಕೊಳ್ಳುವುದನ್ನು ಕಲಿಯಬೇಕು’ ಎಂದು ರಾಯಲ್ ಸ್ಕೂಲ್ ಕಾರ್ಯದರ್ಶಿ ಮಹೇಶ್ ಬಿ.ಗೌಡ ಹೇಳಿದರು.

ಪಟ್ಟಣದ ರಾಯಲ್ ಸ್ಕೂಲ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೌದ್ಧಿಕ ವಿಕಸನಕ್ಕೆ ಮಕ್ಕಳು ಮಾಡುವ ಚುರುಕು, ಚಾಣಾಕ್ಷತನದ ವ್ಯವಹಾರ ಸಹಕಾರಿ. ವ್ಯವಹಾರದ ಲಾಭ ನಷ್ಟ ಎಲ್ಲವನ್ನು ಎಳೆಯ ವಯಸ್ಸಿನಲ್ಲಿ ತಿಳಿಯಲಿದ್ದಾರೆ. ಇಂತಹ ವಿವಿಧ ಚಟುವಟಿಕೆಗಳು ಮಕ್ಕಳಿಗೆ ಓದುವ ಹಂಬಲ ಹೆಚ್ಚಿಸಲಿದೆ’ ಎಂದರು.

‘ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಬದುಕುವ ಕಲೆ ರೂಢಿಸಲು ಮಕ್ಕಳ ಸಂತೆ ಪೂರಕವಾಗಿದೆ. ಪೋಷಕರು ನಿತ್ಯಬಳಕೆ ವಸ್ತುಗಳನ್ನು ಖರೀದಿಸಲು ಮಕ್ಕಳನ್ನು ಅಂಗಡಿಗಳಿಗೆ ಕಳಿಸುವುದು ವಾಡಿಕೆಯಾಗಿದ್ದು, ಕಳಪೆ ವಸ್ತು ಖರೀದಿಸುವುದು ತಪ್ಪಲಿದೆ. ಸರಿಯಾದ ಲೆಕ್ಕಾಚಾರ ಕೂಡ ಕಲಿಯಬಹುದಾಗಿದೆ’ ಎಂದು ಹುರಿದುಂಬಿಸಿದರು.

ಮಕ್ಕಳು ಮನೆಯಿಂದಲೇ ಪೋಷಕರಿಂದ ತಯಾರಿಸಿಕೊಂಡು ತಂದಿದ್ದ ಗೋಬಿ ಮಂಚೂರಿ, ವಡಾಪಾವ್, ಚುರುಮುರಿ, ಬೋಂಡಾ, ಸಮೋಸಾ, ಚಕ್ಕುಲಿ, ನಿಪ್ಪಟ್ಟು, ಮದ್ದೂರು ವಡೆ ಹಾಗೂ ಬಗೆಬಗೆಯ ತಿನಿಸು, ಮೆಣಸಿನಕಾಯಿ, ಬದನೆಕಾಯಿ, ಪಪ್ಪಾಯಿ, ಕೀರೆಸೊಪ್ಪು, ಪಾಲಾಕ್ ರೀತಿಯ ತರಾವರಿ ಸೊಪ್ಪು, ತರಕಾರಿಗಳನ್ನು ತಂದು ಮಾರಾಟ ಮಾಡಿದರು. ತಮ್ಮ ವಸ್ತುಗಳನ್ನು ಖರೀದಿಸಿ ಎಂದು ಪಾಲಕರೊಂದಿಗೆ ಸೇರಿಕೊಂಡು ಗ್ರಾಹಕರನ್ನು ಕೂಗಿ ಕರೆದು ವ್ಯಾಪಾರ ಮಾಡಿದರು. ಪಾಲಕರು, ಶಿಕ್ಷಕರು, ನಾಗರಿಕರು ಚೌಕಾಸಿ ಮಾಡಿ ಖರೀದಿಸಿ ಉತ್ತೇಜಿಸಿದರು.

ಶಾಲೆಯ ವ್ಯವಸ್ಥಾಪಕ ದಿನೇಶ್, ಮುಖ್ಯಶಿಕ್ಷಕಿ ಅಂಬಿಕಾ, ಮೇಘನಾ, ಅರ್ಪಿತಾ, ಗೀತಾ, ದಿವ್ಯಾ, ಕಾಂತಮಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.