ಕಿಕ್ಕೇರಿ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಲು ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕ್ರಾಂತಿಕಾರಿ ಪಾದಯಾತ್ರೆ ಹೋರಾಟದ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.

ಕಿಕ್ಕೇರಿ ಹಾಗೂ ಗಂಗೇನಹಳ್ಳಿ, ಕೃಷ್ಣಾಪುರ ಗ್ರಾಮಕ್ಕೆ ಈಚೆಗೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಜನಜಾಗೃತಿ ರಥಯಾತ್ರೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಮೊದಲ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ತರುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ನಾಗಮೋಹನ್ದಾಸ್ ಮಧ್ಯಂತರ ವರದಿ ಪಾಲಿಸದೆ, ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದೆ. ಒಳಮೀಸಲಾತಿ ಜಾರಿ ತರದೆ ಉನ್ನತ ಹುದ್ದೆ, ಹೆಚ್ಚು ಬಡ್ತಿ ಮಾಡಿದೆ. ಸರ್ಕಾರದ ಧೋರಣೆ ಪ್ರತಿಭಟಿಸಿ ರಾಜ್ಯದಾದ್ಯಂತ ಪಾದಯಾತ್ರೆ, ರಥಯಾತ್ರೆ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಎಲ್ಲ ಪಕ್ಷಗಳು ಮಾದಿಗ ಸಮುದಾಯಕ್ಕೆ ದ್ರೋಹ ಬಗೆದಿವೆ ಎಂದರು.

ಜೂನ್ 9ರಂದು ಸಮುದಾಯದ ಎಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಸರ್ಕಾರಕ್ಕೆ ತಮ್ಮ ಸಂಘಟನೆ ಶಕ್ತಿ ಪ್ರದರ್ಶಿಸಿ ಒಳಮೀಸಲಾತಿಗೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಕೃಷ್ಣಯ್ಯ, ಹನುಮಯ್ಯ, ರಮೇಶ, ನಂಜಯ್ಯ, ಕಿಟ್ಟಯ್ಯ, ಪರಮೇಶ್, ಕುಮಾರಸ್ವಾಮಿ, ಸುಂದರ, ಶರತ್, ನಂಜುಂಡ, ರಂಗಸ್ವಾಮಿ, ಜಯರಾಂ, ರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.