ಭಾರತೀನಗರ: ‘ಸಮೀಪದ ದೊಡ್ಡಅರಸಿನಕೆರೆ ಗ್ರಾಮದ ಸಣ್ಣಕ್ಕಿರಾಯಸ್ವಾಮಿ ದೇವಾಲಯದ 12ನೇ ವಾರ್ಷಿಕೋತ್ಸವದ ಕುಂಭಾಭಿಷೇಕ ಜಾತ್ರಾ ಮಹೋತ್ಸವ ಮೇ 12ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ’ ಎಂದು ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ ತಿಳಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ದೇವರಹಳ್ಳಿಯ ಹೊರವಲಯದ ಕಾಲುವೆ ಬಳಿಯಿಂದ ದೇವಾಲಯದ ಬಸವನೊಂದಿಗೆ 101 ಕುಂಭಗಳನ್ನು ಹೊತ್ತ ಮಹಿಳೆಯರು ವೀರಭದ್ರನ ಕುಣಿತದ ಸಮೇತವಾಗಿ ದೇವಾಲಯದ ಬಳಿಗೆ ಬರಲಿದ್ದು, ದೇವಾಲಯದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮಿ, ಬೆಂಗಳೂರು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥಸ್ವಾಮಿ, ಕಾಗಿನೆಲೆ ಮಹಾಸಂಸ್ಥಾನ ಮಠದ ಸಿದ್ದರಾಮನಂದಸ್ವಾಮಿ, ರಾಮೋಹಳ್ಳಿ ಶ್ರೀಕ್ಷೇತ್ರದ ನಾದುರ್ಗಾಪೀಠದ ಶಾಕ್ತ್ಯಂ ಶ್ರೀಶಕ್ತಿಬಾಲ(ಅಮ್ಮ), ರಾಮಕೃಷ್ಣ ಯೋಗಾಶ್ರಮದ ಯೋಗೇಶ್ವರಾನಂದ ಸ್ವಾಮಿ ಅವರು ಆಗಮಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೇ 4ರಿಂದಲೂ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿದ್ದು, 12ರಂದು ವಿಶೇಷ ಪೂಜೆಗಳನ್ನು ನಡೆಸಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಲಿದ್ದು, ಮಧ್ಯಾಹ್ನ ₹5 ಸಾವಿರ ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆಗೆ ಗ್ರಾಮದ ದೇವರಾದ ಕಾಳಮ್ಮ, ಏಳೂರಮ್ಮ, ಬಸವ, ಇತರೆ ದೇವರುಗಳ ಮೆರವಣಿಗೆ ಮಾರನೇಯ ದಿನ ಮುಟ್ಟನಹಳ್ಳಿ, ಗೌಡಯ್ಯನದೊಡ್ಡಿ ಗ್ರಾಮಗಳಲ್ಲೂ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.

ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ಗೌಡ, ಮುಖ್ಯಸ್ಥರಾದ ದೇವರಹಳ್ಳಿ ದೊಡ್ಡೇಗೌಡ, ವಕೀಲ ಡಿ.ಎನ್.ನವೀನ್, ಡಿ.ಎ.ಕೆರೆ ರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.