ಮಳವಳ್ಳಿ: ‘ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ನೀಡಿದ್ದ ರಾಜೀನಾಮೆಯನ್ನು 12ನೇ ದಿನವಾದರೂ ಅಂಗೀಕಾರ ಮಾಡದೇ ವಾಪಾಸ್ ಪಡೆಯಲು ಉಪವಿಭಾಗಾಧಿಕಾರಿ ಅವಕಾಶ ನೀಡಿರುವುದು ಕಾನೂನು ಬಾಹಿರ’ ಎಂದು ಪುರಸಭೆ ಸದಸ್ಯ ಟಿ.ನಂದಕುಮಾರ್ ಆರೋಪಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಎಂಟು ತಿಂಗಳ ಹಿಂದೆ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡು ಅಧ್ಯಕ್ಷರನ್ನಾಗಿ ಬಿಜೆಪಿ ಬೆಂಬಲಿತ ಸದಸ್ಯ ಪುಟ್ಟಸ್ವಾಮಿ ಹಾಗೂ ಎನ್.ಬಸವರಾಜು ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು’ ಎಂದರು.

‘ಆ ಸಂದರ್ಭದಲ್ಲಿ ಮಾಡಿಕೊಂಡಿದ್ದ ಆಂತರಿಕ ಒಪ್ಪಂದಂತೆ ಏ. 21ರಂದು ಪುಟ್ಟಸ್ವಾಮಿ ಮತ್ತು ಎನ್.ಬಸವರಾಜು ರಾಜೀನಾಮೆ ನೀಡಿದ್ದರು. ಕೆಲ ಗೊಂದಲದಿಂದ 9 ದಿನಕ್ಕೆ ಉಪಾಧ್ಯಕ್ಷರು ರಾಜೀನಾಮೆಯನ್ನು ವಾಪಾಸ್ ಪಡೆದಿದ್ದರು. ಆದರೆ 12 ದಿನವಾದರೂ ಅಧ್ಯಕ್ಷ ಪುಟ್ಟಸ್ವಾಮಿ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡದೇ ಉಪವಿಭಾಗಾಧಿಕಾರಿ ರಾಜಕೀಯ ಒತ್ತಡದಿಂದ ರಾಜೀನಾಮೆ ವಾಪಾಸ್ ಪಡೆಯಲು ಅವಕಾಶ ಕೊಟ್ಟಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರಾಜೀನಾಮೆ ಅಂಗೀಕಾರಕ್ಕೆ 10 ದಿನಗಳ ಅವಕಾಶ ಇರುತ್ತದೆ. ಆದರೆ 12 ದಿನಗಳ ನಂತರ ಅಧ್ಯಕ್ಷ ಪುಟ್ಟಸ್ವಾಮಿ ನನಗೆ ಕೆಲವು ಬಲಿಷ್ಠ ಜಾತಿಯವರು ಕೊಲೆ ಬೆದರಿಕೆ ಹಾಕಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದವು ಎಂದು ಆರೋಪಿಸಿ ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದಾರೆ. ಉಪವಿಭಾಗಾಧಿಕಾರಿ ಅವರು ರಾಜಕೀಯ ಒತ್ತಡಕ್ಕೆ ಮಣಿದು ಅವರಿಗೆ ಅವಕಾಶ ನೀಡಿದ್ದಾರೆ. ಕಾನೂನಿನಲ್ಲಿ ಈ ಅವಕಾಶ ಇದೆಯೇ ಎನ್ನುವುದನ್ನು ಅವರು ಸ್ಪಷ್ಪಪಡಿಸಬೇಕು’ ಎಂದು ಆಗ್ರಹಿಸಿದರು.

‘ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಗೆ ನಾವೆಲ್ಲರೂ ಗೈರಾಗಲು ಮುಂದಾಗಿದ್ದನ್ನು ಅರಿತು ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಮುಖಂಡರ ಮೂಲಕ ಸೂಚಿಸಿದ್ದರು. ಅಲ್ಲದೇ ಅಧ್ಯಕ್ಷ ಪುಟ್ಟಸ್ವಾಮಿ ಅವರು ರಾಜೀನಾಮೆ ನೀಡುವಂತೆ ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ.ವೈ.ವಿಜಯೇಂದ್ರ ಅವರೂ ಜಿಲ್ಲಾ ಘಟಕದ ಅಧ್ಯಕ್ಷರ ಮೂಲಕ ಸೂಚನೆ ನೀಡಿದ್ದರೂ ಅವರು ರಾಜೀನಾಮೆ ನೀಡಿಲ್ಲ’ ಎಂದು ಆರೋಪಿಸಿದರು.

ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಸಿದ್ದರಾಜು, ಎಂ.ಟಿ.ಪ್ರಶಾಂತ್, ನಾಗೇಶ್, ಮುಖಂಡರಾದ ಪೊತ್ತಂಡೆ ನಾಗರಾಜು, ನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.