ಮದ್ದೂರು: ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಂತೋಷ್ ಕೊಟ್ಟಿಗೆಯಾರ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಕೆ.ಪಿ.ರುದ್ರೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂತೋಷ್ ಕೊಟ್ಟಿಗೆಯಾರ್ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದಿದ್ದುದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಸಂತೋಷ್ ಕೊಟ್ಟಿಗೆಯಾರ್ ಮಾತನಾಡಿ, ‘ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳಿಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಕೊಪ್ಪ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡ ಶ್ರಮಿಸುತ್ತೇನೆ’ ಎಂದರು.

ಉಪಾಧ್ಯಕ್ಷೆ ಸಾವಿತ್ರಮ್ಮಸುರೇಶ್, ಸದಸ್ಯರಾದ ಕುಮಾರ್ ಕೊಪ್ಪ, ಟಿ.ಎಸ್.ಉಮಾ, ಕವಿತಾಕೆ.ಎನ್ ದಿವಾಕರ್, ಕೆ.ಎಸ್. ನವೀನ್, ಸಿ.ಪಿ. ಜ್ಯೋತಿ, ಕೆ.ಸಿ. ಗಿರೀಶ್, ಜಯಶೀಲ, ಎಚ್.ಜಿ. ಯೋಗಾನಂದ, ಶಭಾನ, ಪರ್ವೀಜ್ ಅಹಮದ್, ಜಿ.ವಿಜಯಕುಮಾರಿ, ಬಿ.ಸಿ. ಸುರೇಶ, ಜೋಗಿಗೌಡ, ಜಯಲಕ್ಷ್ಮಿ, ಎಚ್.ಜಿ. ಮಮತಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ್, ಮಾಜಿ ಸದಸ್ಯ ಅಂಕೇಗೌಡ, ಮುಖಂಡರಾದ ಕೆ.ಜೆ.ಕೃಷ್ಣೇಗೌಡ, ರಮೇಶ್, ಕೆ.ಟಿ.ಬಾಬು, ಕೆ.ಎಸ್.ಪುಟಸ್ವಾಮಿ, ಬಿ.ಎಂ.ರವಿ, ಎಚ್.ಜಿ.ರಾಮಚಂದ್ರು, ಸುಧಾರಾಮು, ಶಿವಲಿಂಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.