ಶ್ರೀರಂಗಪಟ್ಟಣ: ‘ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಮಹೇಶ್ ಜೋಷಿ ಅವರು ತಮ್ಮ ನಿರಂಕುಶ ನಡೆಗಳಿಂದ ಕಸಾಪದ ಘನತೆಗೆ ಕಳಂಕ ತಂದಿದ್ದಾರೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿ.ಹರ್ಷ ಪಣ್ಣೆದೊಡ್ಡಿ ಟೀಕಿಸಿದರು.

ತಾಲ್ಲೂಕಿನ ಬಾಬುರಾಯನಕೊಪ್ಪಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಸಾಪ ತಾಲ್ಲೂಕು ಘಟಕ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಗಿದ ಮರು ದಿನವೇ ಕಸಾಪ ಜಿಲ್ಲಾ ಘಟಕವನ್ನು ವಿಸರ್ಜಿಸಿದರು. ಕಸಾಪ ಬೈಲಾದಂತೆ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಆಯ್ಕೆಯಾದ ನನ್ನ ಸದಸ್ಯತ್ವವನ್ನೇ ವಜಾ ಮಾಡಿದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಜೋಷಿ ಅವರ ವಿರುದ್ಧ 15ಕ್ಕೂ ಹೆಚ್ಚು ಆರೋಪಗಳಲ್ಲಿ 10ಕ್ಕೂ ಹೆಚ್ಚು ಆರೋಪಗಳು ಮೇಲ್ನೋಟಕ್ಕೆ ರುಜುವಾತಾಗಿವೆ. ಇಷ್ಟಾದರೂ ನ್ಯಾಯಾಂಗ ತನಿಖೆ ನಡೆಸುವಂತೆ ಹೇಳಿಕೆ ನೀಡುವ ಮೂಲಕ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಾಮನಹಳ್ಳಿ ಮಹದೇವಸ್ವಾಮಿ, ‘ಮಹೇಶ ಜೋಷಿ ಅವರ ತಪ್ಪು ನಿರ್ಧಾರಗಳಿಂದ, ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಬಳಿಕ ಒಂದು ವರ್ಷ ಜಿಲ್ಲೆಯಲ್ಲಿ ಕಸಾಪ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಘಟಕಗಳು ಮತ್ತೆ ಸಕ್ರಿಯವಾಗಿವೆ. ಕಾಸರಗೋಡು ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಹೇರುವ ಕೇರಳ ಸರ್ಕಾರದ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಪ್ರಾಸ್ತಾವಿಕ ಮಾತುಗಳಾಡಿದರು. ಅಖಿಲ ಭಾರತ ಪಂಚಾಯತ್ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಂ. ಸುಬ್ರಹ್ಮಣ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್ ಮಾತನಾಡಿದರು. ಮುಖ್ಯ ಶಿಕ್ಷಕಿ ಹೇಮಲತಾ ಹರಿಯಾಳ, ಪುರುಷೋತ್ತಮ, ಕೆ.ಬಿ. ಬಸವರಾಜು, ಕೆ.ಟಿ. ರಂಗಯ್ಯ, ಸಿ.ಎಸ್. ವಾಣಿ, ಮಂಜುನಾಥ್, ಬಿ. ಶಂಕರಬಾಬು ಇದ್ದರು.

ರತ್ನಮ್ಮ ನಾಗಮಂಗಲ, ಎಚ್.ಸಿ. ಧನಂಜಯ ಪಾಂಡವಪುರ, ಜೆ. ಜಯರಾಂ, ಸಿ.ಬಿ. ಉಮಾಶಂಕರ್, ಎಚ್.ಎಸ್. ಭರತ್ಕುಮಾರ್, ರಾಮಚಂದ್ರ ಮಳವಳ್ಳಿ, ಅಪ್ಪಾಜಿ ಕೆ.ಶೆಟ್ಟಹಳ್ಳಿ, ಕೆ.ಎಸ್. ಜಯಶಂಕರ್, ಪುರುಷೋತ್ತಮ, ಬಸವರಾಜು ಜೈಪುರ, ‘ಪರಿಸರ’ ರಮೇಶ್, ದಾಸಪ್ರಕಾಶ್, ಸಿದ್ದನಂಜಯ್ಯ, ಸರೋಜ, ಜಯಲಕ್ಷ್ಮಿ ಕೆ.ಆರ್. ಪೇಟೆ, ಚುಂಚಣ್ಣ ಕವಿತೆ ವಾಚಿಸಿದರು.

‘ನ್ಯಾಯಾಂಗ ತನಿಖೆಗೆ ಮನವಿ; ಕಣ್ಣೊರೆಸುವ ತಂತ್ರ’ ಜೋಷಿ ತಪ್ಪು ನಿರ್ಧಾರದಿಂದ ಕಸಾಪ ಚಟುವಟಿಕೆ ಸ್ಥಗಿತ: ಆರೋಪ ‘ತಾಲ್ಲೂಕು ಘಟಕಗಳು ಮತ್ತೆ ಸಕ್ರಿಯ’

‘ಪದ್ಯಗಳಲ್ಲಿ ಪ್ರತಿಮೆಯೇ ಪ್ರಧಾನ’ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಿ ಕೊತ್ತತ್ತಿ ರಾಜು ‘ಗದ್ಯ ನಡಿಗೆಯಾದರೆ ಪದ್ಯ ನಾಟ್ಯ ಎನಿಸಿದೆ. ಪದ್ಯಗಳಲ್ಲಿ ಪ್ರತಿಮೆಯೇ ಪ್ರಧಾನವಾಗಿರುತ್ತದೆ. ಶಬ್ದ ಮತ್ತು ಅರ್ಥ ಮೇಳೈಸಿದರೆ ಕಾವ್ಯದ ರೂಪ ಪಡೆಯುತ್ತದೆ ಎಂದು ಕವಿ ಭಾಮಹ ಹೇಳಿದ್ದಾನೆ. ಕಾವ್ಯ ನಿಚ್ಚಂ ಪೊಸದು ಎಂದು ಪಂಪ ಬಣ್ಣಿಸಿದ್ದಾನೆ. ಕವಿತೆ ಚಿಕಿತ್ಸಕ ದೃಷ್ಟಿಕೋನ ಹೊಂದಿರಬೇಕು. ಸಮಾಜದ ತಲ್ಲಣಗಳಿಗೆ ಕನ್ನಡಿ ಹಿಡಿಯಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.