ಮಳವಳ್ಳಿ: ‘ಮದ್ಯಪಾನ ವಿಚಾರದಲ್ಲಿ ಪತಿಗೆ ಬುದ್ಧಿವಾದ ಹೇಳಿ’ ಎಂದು ಕೋರಿದ್ದ ಮಹಿಳೆ ಹಾಗೂ ಆಕೆ ಪತಿಗೆ ತಲಾ ₹ 5 ಸಾವಿರ ದಂಡ ವಿಧಿಸಿ, ತಲೆ ಬೋಳಿಸಿದ ಆರೋಪದ ಮೇರೆಗೆ ತಾಲ್ಲೂಕಿನ ದ್ಯಾವಪಟ್ಟಣ ಗ್ರಾಮದ ಐವರು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಕವಾಡಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ದಂಪತಿ ನಡುವೆ ಆ. 17ರಂದು ಕಲಹ ನಡೆದಿತ್ತು. ಅದನ್ನು ಮುಖಂಡರ ಗಮನಕ್ಕೆ ತಂದ ಮಹಿಳೆಯು ಪತಿಗೆ ಬುದ್ಧಿವಾದ ಹೇಳಿಸಿದ್ದರು.

‘ಯಾರದೋ ಮಾತು ಕೇಳಿ ನಿನಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಇಬ್ಬರೂ ದಂಡ ಕಟ್ಟಿ, ತಲೆ ಬೋಳಿಸಿಕೊಳ್ಳಿ ಎಂದು ಮುಖಂಡರಾದ ನಾಗಣ್ಣ, ಮಹದೇವ, ಕುಮಾರ, ಸೋಮಣ್ಣ, ಮಲ್ಲಯ್ಯ ಗ್ರಾಮದ ನ್ಯಾಯದ ಕಟ್ಟೆಯಲ್ಲಿ ತಿಳಿಸಿದ್ದರು’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಒತ್ತಡ ಹಾಕಿ ಇಬ್ಬರ ತಲೆ ಕೂದಲು ತೆಗೆಸಿದರು. ಗ್ರಾಮದಲ್ಲಿ ಓಡಾಡಲಾಗದೇ ತೊಂದರೆ ಅನುಭವಿಸುತ್ತಿದ್ದೇನೆ. ಪತಿಗೆ ಬುದ್ಧಿ ಹೇಳಲಿ ಎಂದು ಕೋರಿದರೆ ನಮಗೆ ಅಪಮಾನ ಮಾಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ದೂರಿನಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.