ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

Published 15 ಜೂನ್ 2024, 10:53 IST
Last Updated 15 ಜೂನ್ 2024, 10:53 IST
ಅಕ್ಷರ ಗಾತ್ರ

ಮಳವಳ್ಳಿ (ಮಂಡ್ಯ): ತಾಲ್ಲೂಕಿನ ಗಾಜನೂರು ಗ್ರಾಮದ ಹೊರವಲಯದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಗಳ ಮೇಲೆ ಶುಕ್ರವಾರ ರಾತ್ರಿ ಚಿರತೆ ದಾಳಿ ಮಾಡಿ ಮೇಕೆಯೊಂದನ್ನು ಕೊಂದು ಹಾಕಿದೆ.

ಗ್ರಾಮದ ರಾಜೇಶ್ ಎಂಬುವವರು ತಮ್ಮ ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು. ಶುಕ್ರವಾರ ರಾತ್ರಿ 11 ಗಂಟೆ ವೇಳೆಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಶಬ್ದಕ್ಕೆ ಎಚ್ಚರವಾಗಿ ರಾಜೇಶ್ ಬಂದು ನೋಡುವ ವೇಳೆಗೆ ಮೇಕೆ ಕೊಂದು ಚಿರತೆ ಪರಾರಿಯಾಗಿದೆ.

ಈ ಬಗ್ಗೆ ರೈತ ರಾಜೇಶ್ ಮಾತನಾಡಿ, ‘ಕಳೆದ ವಾರವೂ ನಮ್ಮ ಭಾಗದಲ್ಲಿ ಎರಡು ಮೇಕೆಗಳನ್ನು ಚಿರತೆಗಳು ಸಾಯಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಚಿರತೆಗಳ ಸೆರೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT