ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಂಡವಪುರ |14ರಂದು ಲೋಕ್ ಅದಾಲತ್

Published : 3 ಸೆಪ್ಟೆಂಬರ್ 2024, 14:49 IST
Last Updated : 3 ಸೆಪ್ಟೆಂಬರ್ 2024, 14:49 IST
ಫಾಲೋ ಮಾಡಿ
Comments

ಪಾಂಡವಪುರ: ರಾಷ್ಟೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.14 ರಂದು ಬೃಹತ್ ಜನತಾ ನ್ಯಾಯಾಲಯ ಆಯೋಜಿಸಲಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಮಂಗಳವಾರ ತಿಳಿಸಿದರು.

ಲೋಕ್ ಅದಾಲತ್ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಕಕ್ಷಿದಾರರು  ಕಾನೂನು ಸೇವೆಗಳ ಸಮಿತಿಯನ್ನು   ಸಂಪರ್ಕಿಸ ಬಹುದಾಗಿದೆ ಎಂದು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲ್ಲೂಕಿನಲ್ಲಿ  ಸೆ.14 ರಂದು ಲೋಕ್ ಅದಾಲತ್‌ಗೆ 150 ಎಂವಿಸಿ ಪ್ರಕರಣಗಳು, 9 ಎಂ.ಎಂ.ಆರ್.ಡಿ, 7 ಎಲ್.ಎ.ಸಿ, 100 ವಿಭಾಗದ ದಾವೆ ಪ್ರಕರಣಗಳು, 145 ಇತರೆ ಸಿವಿಲ್ ಪ್ರಕರಣಗಳು, 150 ನಿರ್ದಿಷ್ಟ ಪರಿಹಾರದ ದಾವೆ, 40 ಕ್ರಮಿನಲ್ ಪ್ರಕರಣಗಳು ಹಾಗೂ 330 ಎನ್‌ಐ ಆಕ್ಟ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು  ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಾರ್ವತಮ್ಮ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಬು, ಎಂ.ಪದ್ಮ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕನಗನಮರಡಿ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT