ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮದುವೆಯಾಗಲು ಹೆಣ್ಣು ಕೊಡಿಸುವಂತೆ ಪ್ರಾರ್ಥಿಸಿ ಬ್ರಹ್ಮಚಾರಿಗಳ ಪಾದಯಾತ್ರೆ

Last Updated 23 ಫೆಬ್ರವರಿ 2023, 20:36 IST
ಅಕ್ಷರ ಗಾತ್ರ

ಭಾರತೀನಗರ (ಮಂಡ್ಯ ಜಿಲ್ಲೆ): ಮದುವೆಯಾಗಲು ವಧುಗಳನ್ನು ಕರುಣಿಸುವಂತೆ ಮಲೆಮಹದೇಶ್ವರನಲ್ಲಿ ಪ್ರಾರ್ಥಿಸಿ, ಜಿಲ್ಲೆಯ ವಿವಿಧೆಡೆಯ ಅವಿವಾಹಿತ ಯುವಕರು,‘ಬ್ರಹ್ಮಚಾರಿಗಳ ನಡೆ ಮಲೆ ಮಾದಪ್ಪನೆಡೆಗೆ’ ಘೋಷಣೆಯೊಂದಿಗೆ ಗುರುವಾರ ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಆರಂಭಿಸಿದರು.

ಚಿತ್ರನಟ ಡಾಲಿ ಧನಂಜಯ ನಸುಕಿನ 5 ಗಂಟೆಗೆ ಯಾತ್ರೆಗೆ ಚಾಲನೆ ನೀಡಿ, ‘ದೇಶದ ಅನ್ನದಾತರಾದ ರೈತರ ಮಕ್ಕಳಿಗೆ ಪ್ರೀತಿಯಿಂದ ಹೆಣ್ಣು ಕೊಟ್ಟು ಮದುವೆ ಮಾಡಬೇಕೇ ಹೊರತು ಹಿಂದು–ಮುಂದು ನೋಡಬಾರದು. ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ’ ಎಂದು ಕೋರಿದರು. ಮಳವಳ್ಳಿ ಮುಖ್ಯರಸ್ತೆವರೆಗೂ ತೆರಳಿ ಯಾತ್ರಿಗಳನ್ನು ಬೀಳ್ಕೊಟ್ಟರು.

ರೈತರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ 100ಕ್ಕೂ ಹೆಚ್ಚು ಯುವಕರು ಕೇಸರಿ ಬಣ್ಣದ ಪತಾಕೆ ಹಿಡಿದು ಮುಂದುವರಿದರು. ದಾರಿಯುದ್ದಕ್ಕೂ ‘ಮಹದೇಶ್ವರ ಸ್ವಾಮಿಗೆ ಜೈ’, ‘ಉಘೇ ಮಹದೇವ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.

‘ಹೆಣ್ಣು ಹೆತ್ತವರು ಸರ್ಕಾರಿ ನೌಕರಿಯಲ್ಲಿರುವ ಯುವಕರೇ ಬೇಕೆನ್ನುತ್ತಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಸಾವಿರಾರು ಯುವಕರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವಿವಾಹಿತರೆಂಬ ಪಟ್ಟ ತೆಗೆದು ವಧುಭಾಗ್ಯ ಕರುಣಿಸುವಂತೆ ಕೋರಿ ಪಾದಯಾತ್ರೆ ಮಾಡುತ್ತಿದ್ದೇವೆ’ ಎಂದು ಪಾದಯಾತ್ರಿಯೊಬ್ಬರು ತಿಳಿಸಿದರು.

ಕೆಲವು ತಿಂಗಳ ಹಿಂದೆ ಆದಿ ಚುಂಚನಗಿರಿ ಮಠ ಏರ್ಪಡಿಸಿದ್ದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 700–800 ವಧುಗಳಿಗೆ 25 ಸಾವಿರಕ್ಕೂ ಅಧಿಕ ವರಗಳು ಬಂದಿದ್ದರಿಂದ ಸಮಾವೇಶದಲ್ಲಿ ಗೊಂದಲ ಉಂಟಾಗಿತ್ತು.

ಈ ಬೆಳವಣಿಗೆಯಿಂದ ಬೇಸತ್ತ ಅವಿವಾಹಿತರು, ‘ದೇವರ ಕೃಪೆಯಿಂದಾದರೂ ಹೆಣ್ಣು ದೊರೆಯಲಿ’ ಎಂಬ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮಳವಳ್ಳಿ, ಕೊಳ್ಳೇಗಾಲ, ಹನೂರು, ಕೌದಳ್ಳಿ, ತಾಳುಬೆಟ್ಟದ ಮಾರ್ಗವಾಗಿ ಯಾತ್ರೆ ಫೆ.25 ರಂದು ಮಹದೇಶ್ವರ ಬೆಟ್ಟ ತಲುಪಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT