ಸೋಮವಾರ, ಆಗಸ್ಟ್ 2, 2021
27 °C

10 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಹೊಸದಾಗಿ ಭಾನುವಾರ 10 ಮಂದಿಯಲ್ಲಿ ಕೋವಿಡ್‌– 19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 518ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಿಂದ ಬಂದ ಇಬ್ಬರಲ್ಲಿ ಪಾಸಿಟಿವ್‌ ಬಂದಿದ್ದು ಒಬ್ಬರು ಮಂಡ್ಯ, ಮತ್ತೊಬ್ಬರು ನಾಗಮಂಗಲ ತಾಲ್ಲೂಕಿಗೆ ಸೇರಿದ್ದಾರೆ. 18,033ನೇ ರೋಗಿಯ ಪ್ರಥಮ ಸಂಪರ್ಕಿತರಾಗಿದ್ದ ಐವರಿಗೆ ರೋಗ ಪತ್ತೆಯಾಗಿದ್ದು ಇವರು ನಾಗಮಂಗಲ ತಾಲ್ಲೂಕಿಗೆ ಸೇರಿದ್ದಾರೆ. ರಾಮನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಮಂಡ್ಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಶೀತಜ್ವರದಿಂದ ಬಳಲುತ್ತಿದ್ದು ಕೋವಿಡ್‌ ದೃಢಪಟ್ಟಿದೆ, ಅವರಲ್ಲಿ ಒಬ್ಬರು ಮಂಡ್ಯಕ್ಕೆ ಸೇರಿದ್ದರೆ ಮತ್ತೊಬ್ಬರು ಮದ್ದೂರು ತಾಲ್ಲೂಕಿಗೆ ಸೇರಿದ್ದಾರೆ. ಒಟ್ಟು ಸೋಂಕಿತರಲ್ಲಿ 369 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 149 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ.

ಕೋವಿಡ್‌ ಆಸ್ಪತ್ರೆಯಿಂದ ಭಾನುವಾರ 14 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅವರಲ್ಲಿ 7 ಮಂದಿ ಕೆ.ಆರ್‌.ಪೇಟೆ, 6 ಮಂದಿ ಪಾಂಡವಪುರ, ಒಬ್ಬರು ನಾಗಮಂಗಲ ತಾಲ್ಲೂಕಿಗೆ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.