ಮಂಡ್ಯ: ಮಕಾನ್ಗೆ ಬದಲಾವಣೆ ಮಾಡಿರುವ ತಾಲ್ಲೂಕಿನ ಹೊಸಬೂದನೂರು ಗ್ರಾಮದ ಸ.ನಂ.313ರ ಜಾಗವನ್ನು ಹಿಂದಿನಂತೆಯೇ ಗ್ರಾಮದ ಸ್ಮಶಾನಕ್ಕಾಗಿಯೇ ಮೀಸಲಿಡುವಂತೆ ಆಗ್ರಹಿಸಿ ಗ್ರಾಮಸ್ಥರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಸ.ನಂ.313ರ ಜಾಗವು ಈ ಹಿಂದೆ ಸರ್ಕಾರಿ ಸ್ಮಶಾನವಾಗಿದ್ದು, ನಂತರ 2017ರಲ್ಲಿ ಮಕಾನ್ ಆಗಿ ಬದಲಾವಣೆಯಾಗಿರುತ್ತದೆ. ಗ್ರಾಮಸ್ಥರು ಹೋರಾಟ ಮಾಡಿದ ನಂತರ ಜಿಲ್ಲಾಡಳಿತ ಆರ್ಟಿಸಿಯನ್ನು ಸರ್ಕಾರಿ ಕಟ್ಟೆಯನ್ನಾಗಿ ಇಂಡೀಕರಿಸಿದೆ. ಅಲ್ಲಿಂದ ಇಲ್ಲಿಯವರೆಗೂ ಗ್ರಾಮಸ್ಥರು ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆಂಪೇಗೌಡ, ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಕುಮಾರ್, ರಂಗಣ್ಣ, ಪುಟ್ಟರಾಜು, ಲಕ್ಷ್ಮಣ, ಜಯರಾಮ, ರಮೇಶ, ಧನಂಜಯ, ಚಿಕ್ಕಸ್ವಾಮಿ, ಬೋರಪ್ಪ, ಶಿವಲಿಂಗಯ್ಯ, ಶಂಕರ, ನಾಗೇಂದ್ರ, ಅಭಿಷೇಕ್, ಬಸವರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.