ಬೆಳೆ ವಿಮೆ: ಪ್ರಚಾರಕ್ಕೆ ಸೂಚನೆ
ಬೆಳೆ ವಿಮೆ ಮಾಡಿಸಲು ಆ.16 ಕಡೆಯ ದಿನ. ಎಲ್ಲ ಅರ್ಹ ರೈತರಿಂದ ಬೆಳೆ ವಿಮೆ ಮಾಡಿಸಲು ಕ್ರಮ ವಹಿಸಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು. ರೈತರು ಒಳ್ಳೆಯ ಮಳೆಯಾಗುತ್ತಿದೆ ಎಂದು ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕಬಹುದು. ಬರ ಮತ್ತು ಅತಿವೃಷ್ಟಿ ಎರಡು ಸಂದರ್ಭಗಳಲ್ಲೂ ಬೆಳೆನಷ್ಟವಾಗುತ್ತದೆ. ಹೀಗಾಗಿ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ. ಗ್ರಾಮ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಿ ಎಂದು ಸಿಇಒ ಅವರಿಗೆ ಸಚಿವರು ಸೂಚಿಸಿದರು.