ಗುರುವಾರ , ಜೂನ್ 24, 2021
23 °C

ರಾಮಮಂದಿರ ನಿರ್ಮಾಣಕ್ಕೆ ಕಲ್ಲು ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ 40 ಕೆ.ಜಿ.ತೂಕದ ಸೈಜು ಕಲ್ಲುಗಳನ್ನು ಬುಧವಾರ ಬಿಜೆಪಿ ಕಾರ್ಯಕರ್ತರು, ರಾಮ ಭಕ್ತರು ಅಂಚೆ ಮೂಲಕ ಕಳುಹಿಸಿಕೊಟ್ಟರು.

ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಜುಗಲ್ಲಿನ ಮೇಲೆ ಶ್ರೀ ರಾಮ ಎಂದು ವಿಶೇಷವಾಗಿ ಕೆತ್ತಿಸಿ, ರೈಲ್ವೆ ನಿಲ್ದಾಣದ ಬಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಡಿಗಲ್ಲನ್ನು ಅಂಚೆ ಕಚೇರಿವರೆಗೆ ಹೊತ್ತು ತರಲಾಯಿತು.

ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ, ರಾಮ ಜಪ ಮಾಡುತ್ತಾ ಅಂಚೆ ಕಚೇರಿ ವರೆಗೆ ಹೊತ್ತು ತಂದು ನಂತರ ಸ್ಪೀಡ್ ಪೋಸ್ಟ್ ಮಾಡಲಾಯಿತು.

ವಿವಿಧೆಡೆ ಸಂಭ್ರಮ: ನಗರ ಸರಿದಂತೆ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿರುವ ರಾಮ ಮಂದಿಗಳಲ್ಲಿ ಬುಧವಾರ ವಿಶೇಷ ಪೂಜೆ ನಡೆದವು.

ಊರಿನ ಪ್ರಮುಖ ಸ್ಥಳಗಳಲ್ಲಿ ಭಾಗಧ್ವಜ ಹಾರಾಡಿದವು. ಕೆಲವೆಡೆ ವಿಶೇಷ ಪೂಜೆಗಳೊಂದಿಗೆ ರಾಮನ ಸ್ತುತಿ ಮಾಡಲಾಯಿತು. ರಾಮ ಭಕ್ತರ ಮನೆಗಳಲ್ಲೇ ವಿಶೇಷ ಪೂಜೆ ಸಲ್ಲಿಸಿ, ಅಯೋಧ್ಯೆಯ ನೇರ ಪ್ರಸಾರವನ್ನು ದೂರ ದರ್ಶನದಲ್ಲಿ ವೀಕ್ಷಿಸಿ ಪುನೀತರಾದರು. ಅಕ್ಕ ಪಕ್ಕದ ಮನೆಯವರಿಗೆ ಸಿಹಿ ಹಂಚಿ ಸಂಭ್ರಮಪಟ್ಟರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು‌. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇಡೀ ದಿನ ಬಾರ್ ಗಳು ಬಂದ್ ಆಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು