ಮಂಡ್ಯ: ನಗರ ಮತ್ತು ಪಟ್ಟಣಗಳಿಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಜನರು ಕೆಲಸದ ನಿಮಿತ್ತ ಬರುತ್ತಾರೆ. ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರು ತೀವ್ರ ಪರದಾಡುವಂತಾಗಿದೆ.

‘ದೀಪದ ಬುಡದಲ್ಲೇ ಕತ್ತಲು’ ಎಂಬಂತೆ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯವೇ ಹಲವು ತಿಂಗಳಿಂದ ಬಾಗಿಲು ಮುಚ್ಚಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಮಸ್ಯೆಯನ್ನು ಕಂಡೂ ಕಾಣದಂತೆ ವರ್ತಿಸುತ್ತಾರೆ. ಶೌಚಾಲಯಗಳ ನಿರ್ವಹಣೆ ಮಾಡಬೇಕಾದ ನಗರಸಭೆ ಅಧಿಕಾರಿಗಳು ಹೊಣೆಗಾರಿಕೆ ಮರೆತು, ತೀವ್ರ ನಿರ್ಲಕ್ಷ್ಯ ತೋರಿದ್ದಾರೆ.

ಹರ್ಡೀಕರ್ ಭವನ ಹಾಗೂ ನ್ಯಾಯಾಧೀಶರ ಮನೆ ಸಮೀಪವಿರುವ ಸಾರ್ವಜನಿಕ ಶೌಚಾಲಯ ಬಾಗಿಲು ಹಾಕಿದೆ. ಸರ್ ಎಂ.ವಿ. ಸ್ಟೇಡಿಯಂ ಒಳಗಿರುವ ಶೌಚಾಲಯವನ್ನು ಕಾರ್ಯಕ್ರಮವಿದ್ದಾಗ ಮಾತ್ರ ಬಳಕೆಗೆ ಬಾಗಿಲು ತರೆಯಲಾಗಿರುತ್ತದೆ. ಕ್ರೀಡಾಂಗಣದ ಪಕ್ಕದಲ್ಲೇ ಇರುವ ಇನ್ನೆರಡು ಶೌಚಾಲಯಗಳಿಗೆ ಶಾಶ್ವತವಾಗಿ ಬಾಗಿಲು ಮುಚ್ಚಲಾಗಿದೆ.

ನಗರದ ಬನ್ನೂರು ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಎದುರಿಗಿನ ಶೌಚಾಲಯ ಮತ್ತು ಮೈಸೂರು–ಬೆಂಗಳೂರು ಹೆದ್ದಾರಿಯ ರಾಜ್ಕುಮಾರ್ ಬಡಾವಣೆಯಲ್ಲಿರುವ ಶೌಚಾಲಯಗಳೂ ಇದ್ದೂ ಇಲ್ಲದಂತಾಗಿವೆ.

ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಿಗಳು, ಮಧ್ಯಾಹ್ನದ ವೇಳೆ ವ್ಯಾಪಾರ ವಹಿವಾಟು ನಡೆಸಲು ಬಂದ ಗ್ರಾಮಸ್ಥರು, ಬೇರೆ ಊರುಗಳಿಂದ ಬಂದ ಪ್ರಯಾಣಿಕರು, ಕಾರು ಮತ್ತು ಆಟೋ ಚಾಲಕರು ಸಾರ್ವಜನಿಕ ಶೌಚಾಲಯವಿಲ್ಲದೆ ತೊಂದರೆ ಪಡುವಂತಾಗಿದೆ.

ಬೆರಳೆಣಿಕೆ ಕಡೆ ಇರುವ ಶೌಚಾಲಯಗಳು ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಪುರುಷರು ರಸ್ತೆ ಬದಿ, ಖಾಲಿ ನಿವೇಶನ, ಪಾಳು ಕಟ್ಟಡಗಳ ಬಳಿ ಜಲಬಾಧೆ ತೀರಿಸಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಪಾಡು ಹೇಳತೀರದಾಗಿದೆ.

ನಿರ್ವಹಣೆಯಿಲ್ಲದ ಶೌಚಾಲಯಗಳು

ನಾಗಮಂಗಲ: ಪಟ್ಟಣದ ವ್ಯಾಪ್ತಿಯಲ್ಲಿರುವ ಮೂರು ಶೌಚಾಲಯಗಳಲ್ಲೂ ಸರಿಯಾದ ನಿರ್ವಹಣೆಯಿಲ್ಲದೇ ಬಳಕೆ ಮಾಡಲು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಜೊತೆಗೆ ರೋಗಭೀತಿ ಕಾಡುತ್ತಿದೆ.

ಪಟ್ಟಣದ ಟಿ.ಬಿ. ಬಡಾವಣೆಯ ಪ್ರವಾಸಿ ಮಂದಿರದ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಮೂಲಸೌಲಭ್ಯಗಳಿಲ್ಲ. ಜೊತೆಗೆ ಬಳಕೆಗೆ ಯೋಗ್ಯವಾಗಿಲ್ಲ. ಸ್ವಚ್ಛತೆಯೂ ಮರೀಚಿಕೆಯಾಗಿದೆ. ಅಲ್ಲದೇ ಪಟ್ಟಣದ ತಾಲ್ಲೂಕು ಕಚೇರಿಯ ಬಳಿ ಇರುವ ಶೌಚಾಲಯದಲ್ಲಿ ಪೈಪ್ ಸೇರಿದಂತೆ ಪಿಂಗಾಣಿ ಘಟ್ಟಗಳು ಹೊಡೆದು ಹೋಗಿವೆ. ಜೊತೆಗೆ ಮತ್ತೊಂದು ಶೌಚಾಲಯ ಪಟ್ಟಣದ ಮರಿಯಪ್ಪ ಬಸ್ ನಿಲ್ದಾಣದ ಬಳಿಯಿದ್ದು, ಅದೂ ಸಹ ಸಮರ್ಪಕ ನಿರ್ವಹಣೆಯಿಲ್ಲದೇ ಹಳ್ಳ ಹಿಡಿದಿತ್ತು. ಕೆಲ ದಿನಗಳ ಹಿಂದೆ ಆ ಶೌಚಾಲಯವನ್ನು ಹೊಡೆದು ಹಾಕಲಾಗಿದೆ. ಅಲ್ಲದೇ ಈ ಎಲ್ಲ ಶೌಚಾಲಯಗಳೂ ಹಣ ಪಾವತಿಸಿ ಉಪಯೋಗಿಸುವ ಸೌಲಭ್ಯವನ್ನು ನೀಡಲಾಗಿದೆ.

ಶೌಚಾಲಯಗಳಲ್ಲಿ ನಲ್ಲಿ ವ್ಯವಸ್ಥೆ ಇಲ್ಲವಾಗಿದೆ. ಸಾರ್ವಜನಿಕರು ಡ್ರಮ್ ಗಳಲ್ಲಿ ಇರುವ ನೀರನ್ನು ತೆಗೆದುಕೊಂಡು ಹೋಗಿ ಬಳಸುವ ದುಸ್ಥಿತಿ ನಿರ್ಮಾಣವಾಗಿದೆ. ಮಹಿಳಾ ಮತ್ತು ಪುರುಷ ವಿಭಾಗದ ಯಾವುದೇ ಶೌಚಾಲಯಗಳಲ್ಲೂ ಸರಿಯಾದ ಬಾಗಿಲಿನ ವ್ಯವಸ್ಥೆಯಿಲ್ಲ. ಜೊತೆಗೆ ಅಂಗವಿಕಲರ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಜೊತೆಗೆ ಮಹಿಳಾ ನಿರ್ವಾಹಕಿಯರು ಶೌಚಾಲಯದಲ್ಲಿ ಇಲ್ಲ.

ಬಯಲು ಶೌಚ ಇನ್ನೂ ಜೀವಂತ!

ಮಳವಳ್ಳಿ: ಪಟ್ಟಣದ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಶೌಚಾಲಯವಿದ್ದರೂ ಜನರು ಬಯಲು ಪ್ರದೇಶವನ್ನೇ ಹೆಚ್ಚು ಅವಲಂಬಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಶೌಚಾಲಯದಲ್ಲಿ ನೀರಿನ ಕೊರತೆ ಕಾಡುತ್ತದೆ. ಅಲ್ಲದೇ ಕೊಳ್ಳೇಗಾಲ ರಸ್ತೆಯಲ್ಲಿ ಇರುವ ಶೌಚಾಲಯ ಸ್ವಚ್ಛತೆಯ ಸಮಸ್ಯೆಯಿಂದ ಕೂಡಿದೆ. ಇದ್ದರಿಂದ ಸಾರ್ವಜನಿಕರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.

ಪಟ್ಟಣದ ದೊಡ್ಡಕೆರೆ ಬಳಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನದಲ್ಲಿ ಸಾರ್ವಜನಿಕ ಶೌಚಾಲಯ ಮುಚ್ಚಲಾಗಿದೆ. ಉದ್ಯಾನದ ನಿರ್ವಹಣೆ ಕೊರತೆಯಿಂದ ಶೌಚಾಲಯ ಬಳಕೆಗೆ ಲಭ್ಯವಿಲ್ಲದಂತಾಗಿದೆ. ಇದ್ದರಿಂದ ವಾಯು ವಿಹಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಭವನದ ಪಕ್ಕದ ಉದ್ಯಾನ ಹಾಗೂ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಇರುವುದರಿಂದ ಸಾರ್ವಜನಿಕರು ಇಲ್ಲಿಯೂ ಸಹ ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ.

ಮದ್ದೂರು ಪಟ್ಟಣದ ಸ್ಥಳೀಯ ಪುರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ 5 ಸಾರ್ವಜನಿಕ ಶೌಚಾಲಯಗಳು ಇವೆ. ಸ್ಥಳೀಯ ಪುರಸಭೆಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಪಟ್ಟಣದ ಪದವಿ ಪೂರ್ವ ಕಾಲೇಜಿನ ಸರ್ಕಲ್ (ಹೈಸ್ಕೂಲ್ ಸರ್ಕಲ್) ನಲ್ಲಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವು ಬಹಳ ವರ್ಷಗಳಿಂದ ಯಾವುದೇ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ.

ಗಬ್ಬು ನಾರುತ್ತಿರುವ ಶೌಚಾಲಯದ ಗುಂಡಿ

ಶ್ರೀರಂಗಪಟ್ಟಣ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಗುಂಡಿ ಸದಾ ಕಾಲ ತೆರೆದಿರುವುದರಿಂದ ಗಬ್ಬು ವಾಸನೆ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಕೂರಬೇಕಾದ ಪರಿಸ್ಥಿತಿ ಇದೆ. ಬಸ್ ನಿಲ್ದಾಣದ ಕಾಂಪೌಂಡ್ ಎಡ ಭಾಗದಲ್ಲಿರುವ ಶೌಚಾಲಯ ಗುಂಡಿಯ ಮೇಲ್ಭಾಗವನ್ನು ಮುಚ್ಚದೆ ಹಾಗೇ ಬಿಡಲಾಗಿದೆ. ಕೆಲವು ವೇಳೆ ಇದರಿಂದ ತ್ಯಾಜ್ಯ ಉಕ್ಕಿ ಹೊರಗೆ ಹರಿಯುತ್ತದೆ. ಇದರಿಂದ ಬರುವ ಕೆಟ್ಟ ವಾಸನೆ ಬಸ್ ನಿಲ್ದಾಣದಲ್ಲಿ ಕೂರುವ ಜನರು ಆಟೊ ಚಾಲಕರು ಮತ್ತು ಪಟ್ಟಣದ ಒಳಗೆ ಮತ್ತು ಹೊರಗೆ ಓಡಾಡುವವರ ಮೂಗಿಗೆ ಬಡಿಯುತ್ತಿದೆ ಎಂದು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ಸಮಸ್ಯೆ ತೋಡಿಕೊಂಡಿದ್ದಾರೆ.

ಸಂತೆಗೆ ಬಂದ ರೈತರ ಪರದಾಟ

ಪಾಂಡವಪುರ: ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯು ಹಲವಾರು ವರ್ಷಗಳ ಹಿಂದೆಯೇ ಶೌಚಾಲಯವನ್ನು ನಿರ್ಮಿಸಿತ್ತು. ಆದರೆ ಈ ಶೌಚಾಲಯವನ್ನು ಪ್ರಾರಂಭಿಸಲೇ ಇಲ್ಲ. ಈಗ ಶೌಚಾಲಯವು ಪಾಳುಬಿದ್ದಿದೆ. ಈ ಶೌಚಾಲಯವು ಬಳಕೆಯಾಗದೆ ಸರ್ಕಾರದ ಲಕ್ಷಾಂತರ ರೂಪಾಯಿಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಪಟ್ಟಣದ ಸಂತೆ ಮೈದಾನದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಜಡಿದಿದ್ದರಿಂದ ಶೌಚಾಲಯವು ಬಳಕೆಗೆ ಬಾರದಂತಾಗಿದೆ. ಸಂತೆಗೆ ಬರುವ ರೈತರು ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಶೌಚಾಲಯವಿಲ್ಲದೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈಗ ಆಸ್ಪತ್ರೆಯ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದ್ದು ಕಾಮಗಾರಿ ನಡೆಯುತ್ತಿದೆ.

ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ

ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ಹಲವು ಕಡೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇದ್ದರೂ ಸಾರ್ವಜನಿಕ ಬಳಕೆ ಮತ್ತು ಸ್ವಚ್ಛತೆಗೆ ಆದ್ಯತೆ ಕಡಿಮೆ ಇದೆ. ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಶಿಕ್ಷಕರ ಭವನದ ಬಳಿ ಹೊಸಹೊಳಲು ಬಳಿ ಕ್ರೀಡಾಂಗಣದ ಬಳಿ ಇದೆಯಾದರೂ ಸಾರ್ವಜನಿಕರು ಹಣ ಪಾವತಿಸಿ ಬಳಸಬೇಕಿದೆ. ಪುರಸಭೆಯವರು ಕಾಯಂ ಆಗಿ ಸಿಬ್ಬಂದಿ ನೇಮಿಸದಿರುವುದರಿಂದ ಶೌಚಾಲಯ ನಿರ್ವಹಣೆಯ ಹೊಣೆ ಹೊತ್ತವರು ಹಣ ಪಾವತಿಸುವಂತೆ ಒತ್ತಾಯಿಸುವುದು ಸಾಮಾನ್ಯವಾಗಿದೆ. ಕ್ರೀಡಾಂಗಣದಲ್ಲಿ ಶೌಚಾಲಯ ಇದ್ದರೂ ನಿರ್ವಹಿಸುವವರಿಲ್ಲದೆ ಯಾವಾಗಲೂ ಮುಚ್ಚಲ್ಪಟ್ಟಿರುತ್ತದೆ. ಹೊಸಹೊಳಲು ಗ್ರಾಮದಲ್ಲಿ ತೆರೆದಿದ್ದ ಸಾರ್ವಜನಿಕ ಶೌಚಾಲಯದ ಸ್ಥಿತಿಯೂ ಇದೇ ಆಗಿದೆ. ಶೌಚಾಲಯಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕಾದ ಜವಾಬ್ದಾರಿ ಹೊರಬೇಕಾದ ಪುರಸಭೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸದಿರುವದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಏನಂತಾರೆ..?

ನಗರದಲ್ಲಿ ವಿವಿಧೆಡೆ ಶೌಚಾಲಯ ಕಟ್ಟಡಗಳನ್ನು ನಿರ್ಮಾಣ ಮಾಡಿರುತ್ತಾರೆ. ಆದರೆ ಬಾಗಿಲು ಹಾಕಿರುವುದೇ ಇವರ ಸಾಧನೆ ಎಂಬಂತೆ ನಗರದಾದ್ಯಂತ ತೋರಿಸಿಕೊಂಡಿದ್ದಾರೆ. ಜನರ ಬಳಕೆಗೆ ಇಲ್ಲವೆಂದ ಮೇಲೆ ಯಾವ ಪುರುಷಾರ್ಥಕ್ಕೆ ಶೌಚಾಲಯ ಕಟ್ಟಡಗಳನ್ನು ಕಟ್ಟಿಸಬೇಕು – ಟಿ.ವರಪ್ರಸಾದ್ ಉಪಾಧ್ಯಕ್ಷ ಮಂಡ್ಯ ಫುಟ್ಬಾಲ್ ಅಸೋಷಿಯೇಷನ್

ಮಂಡ್ಯ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಶೌಚಾಲಯ ಕಟ್ಟಡ ಬಳಕೆಯಾಗುತ್ತಿಲ್ಲ. ಕಾರಣ ಕೇಳಿದರೆ ನೀರಿಲ್ಲವೆಂದು ಅಲ್ಲಿಯ ಸಿಬ್ಬಂದಿ ಹೇಳುತ್ತಾರೆ. ಪ್ರತಿದಿನ ನೂರಾರು ಜನರು ಗ್ರಾಮೀಣ ಭಾಗದಿಂದ ಕಚೇರಿಗೆ ಬರುತ್ತಾರೆ. ಅವರ ಪರಿಸ್ಥಿತಿ ಏನಾಗಬೇಕು – ಥಾಮಸ್ ಬೆಂಜಮಿನ್ (ಕಿಟ್ಟಪ್ಪ) ಸಾಮಾಜಿಕ ಹೋರಾಟಗಾರ ಮಂಡ್ಯ

ಕಳೆದ ಒಂದು ವರ್ಷದಿಂದ ಈ ಶೌಚಾಲಯದ ಗುಂಡಿ ತೆರೆದ ಸ್ಥಿತಿಯಲ್ಲೇ ಇದೆ. ಶೌಚದ ಗುಂಡಿಯನ್ನು ಸಕಾಲಕ್ಕೆ ಖಾಲಿ ಮಾಡದ ಕಾರಣ ಅದರಿಂದ ತ್ಯಾಜ್ಯ ಹೊರಗೆ ಹರಿಯುತ್ತಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೇಲ್ವಿಚಾರಕರಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೂ ಇತ್ತ ಗಮನ ಹರಿಸುತ್ತಿಲ್ಲ – ಗಂಜಾಂ ಕುಮಾರಸ್ವಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಜಯಕರ್ನಾಟಕ ಜನಪರ ವೇದಿಕೆ ಶ್ರೀರಂಗಪಟ್ಟಣ

ನಿರ್ವಹಣೆ: ಸಿದ್ದು ಆರ್.ಜಿ.ಹಳ್ಳಿ

ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್, ಹಾರೋಹಳ್ಳಿ ಪ್ರಕಾಶ್, ಮೋಹನ್ ರಾಗಿಮುದ್ದನಹಳ್ಳಿ, ಯು.ವಿ. ಉಲ್ಲಾಸ್, ಟಿ.ಕೆ. ಲಿಂಗರಾಜು, ಎಂ.ಆರ್. ಅಶೋಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.