ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜನವರಿ 5ರಿಂದ ಆರಂಭವಾಗಿರುವ ಕೊಠಾರೋತ್ಸವ( ಅಧ್ಯಯನೋತ್ಸವ) ಜ.15ರವರೆಗೆ ವೈಭವದಿಂದ ಪ್ರತಿನಿತ್ಯ ನೆರವೇರಲಿದೆ.

ವೈಷ್ಣವಪಂಥದಲ್ಲಿ ನಾರಾಯಣನ ಸಾಕ್ಷಾತ್ಕಾರ ಪಡೆದು ದೈವತ್ವಕ್ಕೇರಿದ 12ಮಂದಿ ಆಳ್ವಾರುಗಳಿಗೆ ಧನುರ್ಮಾಸ ವೇಳೆ ವಿಶೇಷ ಮಾಲೆ, ಮರ್ಯಾದೆ ಸಮರ್ಪಿಸುವ ಹಾಗೂ ಅವರನ್ನು ನೆನೆಯುವ ಮಹೋತ್ಸವವಾಗಿದ್ದು ಕೊಠಾರಮಂಟಪದಲ್ಲಿ ಪ್ರತಿಸಂಜೆ ಆಳ್ವಾರುಗಳು ಮತ್ತು ರಾಮಾನುಜಾರ್ಯರಿಗೆ ಮಾಲೆಮರ್ಯಾದೆ ಜರುಗುತ್ತಿದೆ.

ನಿತ್ಯ ಸಂಗೀತರಾಮಾಯಣ, ಅರೆಯರ್ ಪಾಟ್ಟು ಹಾಗೂ ದಿವ್ಯ ಪ್ರಬಂಧಪಾರಾಯಣದೊಂದಿಗೆ ಚೆಲುವನಾರಾಯಣನಿಗೆ ಪ್ರತಿದಿನ ಸಂಜೆ ಉತ್ಸವಗಳು ನಡೆಯುತ್ತಿದೆ.

ಪ್ರತಿದಿನ ಸಂಜೆ ರಾಜಬೀದಿಯಲ್ಲಿ ವಿವಿಧ ಕೈಂಕರ್ಯಪರರಿಂದ ದೇವಾಲಯದ ಕೈಪಿಡಿ ಸಂಪ್ರದಾಯದಂತೆ ಸ್ವಾಮಿಗೆ ಪುಷ್ಪಕೈಂಕರ್ಯ ನಂತರ ದೇವಾಲಯದಲ್ಲಿ ಸೇವೆಗಳು ನಡೆಯಲಿದೆ. ಪ್ರತಿದಿನ ವೈವಿಧ್ಯಮಯ ಪುಷ್ಪಾಲಂಕಾರದೊಂದಿಗೆ, ಪಾರಂಪರಿಕ ನೈವೇದ್ಯಗಳು ಸ್ವಾಮಿಗೆ ಅರ್ಪಣೆಯಾಗುವುದು ಕೊಠಾರೋತ್ಸವದ ವಿಶೇಷವಾಗಿದೆ.

ಕೊಠಾರೋತ್ಸವವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.