ಮೇಲುಕೋಟೆ: ಮೇಲುಕೋಟೆಯಲ್ಲಿ ಭಕ್ತರಿಂದ ಸಂಗ್ರಹವಾಗುವ ಆದಾಯಕ್ಕೆ ಕೊರತೆ ಇಲ್ಲ. ಆದರೆ ಇಲ್ಲಿನ ಪಂಚಕಲ್ಯಾಣಿಯಲ್ಲಿ ಭಕ್ತರೇ ಪೂಜೆ ಹಾಗೂ ಪ್ರೀ ವೆಡಿಂಗ್ ಶೂಟ್ ಮಾಡಲು ಭಕ್ತರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಮೇಲುಕೋಟೆ ಪ್ರಾಕಾರದಲ್ಲಿ ರಾಯಗೋಪುರ, ಶ್ರೀರಾಮಚಂದ್ರ ಸೀತಾಮಾತೆ ವನವಾಸದ ಸಂದರ್ಭದ್ದೆನ್ನಲಾದ ಧನುಷ್ಕೋಟಿ, ಕೈಸಾಲೆ ದೇವಾಲಯ ಹಾಗೂ ಮಂಟಪಗಳಿಂದ ಕೂಡಿರುವ ಪಂಚಕಲ್ಯಾಣಿ, ಅಕ್ಕತಂಗಿ ಕೊಳಗಳಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಕ್ಷೇತ್ರಕ್ಕೆ ವಾರ್ಷಿಕ ಲಕ್ಷಕ್ಕೂ ಅಧಿಕ ಅನುದಾನ, ಆದಾಯ ಲಭಿಸುತ್ತಿದೆ. ಆದರೂ ‘ರಾಜ್ಯ ಧಾರ್ಮಿಕ ದತ್ತಿ ಇಲಾಖೆ 2025ರಲ್ಲಿ ಸೇವಾದರ ಪರಿಷ್ಕರಣೆಗೊಳಿಸಿದೆ’ ಎಂಬ ನೆಪ ಹೇಳಿ ಅಭಿಷೇಕ , ಅರ್ಚನೆ, ಪೂಜಾ ಕಾರ್ಯಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಜತೆಗೆ ಇಲ್ಲಿನ ಪಂಚ ಕಲ್ಯಾಣಿಯಲ್ಲಿ ಭಕ್ತರೇ ಹಣ್ಣುಕಾಯಿ ಇಟ್ಟು ಪೂಜೆ ಮಾಡಿಕೊಳ್ಳಲು ಹಣ ವಸೂಲಿ ಮತ್ತು ಮಣೆಪೂಜೆ ಹಾಗೂ ದಾಸಪ್ಪ ಬಳಿಯೂ ಹಣ ಕೀಳುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟೆಲ್ಲ ಆದಾಯ ಲಭಿಸುತ್ತಿದ್ದರೂ ದೂರದಿಂದ ಬರುವ ಭಕ್ತರಿಗೆ ನೆಲೆಸಲು ವಸತಿ ಸೌಕರ್ಯಗಳಿಲ್ಲ. ಖಾಸಗಿ ವಸತಿಗೃಹ, ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡುವ ಪರಿಸ್ಥಿತಿ ಎದುರಾಗಿದೆ. ದೇವಾಲಯದ ಆದಾಯದ ಮೇಲೆ ಮಾತ್ರ ಕಣ್ಣಿಟ್ಟಿರುವ ಮುಜುರಾಯಿ ಹಾಗೂ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳು ಭಕ್ತರಿಗೆ ಕನಿಷ್ಠ ಸೌಲಭ್ಯ ನೀಡಲು ಮನಸ್ಸು ಮಾಡಿಲ್ಲ ಎಂಬುದು ಭಕ್ತರ ಅಳಲು. ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳೂ ಇಲ್ಲಿವೆ.

ಸುರಕ್ಷತೆ ಇಲ್ಲ!: ಸೆ. 15 ರಂದು ಕಲ್ಯಾಣಿಯಲ್ಲಿ ಮೃತಪಟ್ಟಿದ್ದು, ‘ಕಾಲುಜಾರಿ ಬಿದ್ದು ವ್ಯಕ್ತಿಸಾವು’ ಎಂದು ದೂರು ದಾಖಲಾಗಿದೆ. ಆದರೆ ಈ ಸಾವಿಗೆ ಹೊಣೆಯಾರು ಎಂದು ಸ್ಥಳೀಯರು, ಭಕ್ತರು ಪ್ರಶ್ನಿಸಿದ್ದಾರೆ. ಕಲ್ಯಾಣಿಯಲ್ಲಿ ಶುಲ್ಕ ಪಡೆಯುವ ಅಧಿಕಾರಿಗಳು ಸುರಕ್ಷಾ ಪರಿಕರ ಒದಗಿಸಿಲ್ಲ.

‘ಕಲ್ಯಾಣಿಯಲ್ಲಿ ಕಾಲುಜಾರಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ₹10 ಲಕ್ಷ ಪರಿಹಾರ ಕೊಡಿ’ ಎಂದು ಭಕ್ತರಾದ ಪಾಂಡವಪುರ ವಿಶ್ವನಾಥ್ ಆಗ್ರಹಿಸಿದ್ದಾರೆ. ಮೇಲುಕೋಟೆ ದೇವರ ಹೆಸರಿನಲ್ಲಿ ಹಗಲು ದರೋಡೆಯಾಗುತ್ತಿದೆ. ಕಲ್ಯಾಣಿಯಲ್ಲಿ ಪೂಜೆ ಮಾಡುವ ಭಕ್ತರಿಂದ ಹಣ ವಸೂಲಿ ಮಾಡುವ ಅಧಿಕಾರಿಗಳು ಸುರಕ್ಷಾ ಕ್ರಮ ಕೈಗೊಳ್ಳಬೇಕು. ಕಾಲುಜಾರಿ ಬಿದ್ದ ಕುಟುಂಬಕ್ಕೆ ₹10ಲಕ್ಷ ಪರಿಹಾರ ನೀಡಬೇಕು.

ಪ್ರಕಾಶ್ ಸ್ಥಳೀಯ ನಿವಾಸಿ.

ದುಬಾರಿ ಪ್ರೀವೆಡಿಂಗ್ ಫೋಟೊ ಶೂಟ್: ಇಲ್ಲಿನ ರಾಯಗೋಪುರ ಹಾಗೂ ಪಂಚಕಲ್ಯಾಣಿ ಸೌಂದರ್ಯದ ಹಿನ್ನೆಲೆಯಲ್ಲಿ ಮದುವೆ ನಿಗದಿಯಾದ ಯುವ ಜೋಡಿ ಫೊಟೊ ಶೂಟ್ ವಿಡಿಯೋ ಚಿತ್ರೀಕರಣ ಮಾಡಿಸಿಕೊಳ್ಳಲು ದಿನಕ್ಕೆ ₹ 5000 ಮಾಡಿಕೊಳ್ಳಬೇಕಿದೆ. ಹೀಗಾಗಿ ಎಷ್ಟೋ ಜೋಡಿಗಳು ಮೈಸೂರು ಹಾಗೂ ವರುಣ ದೇವಾಲಯಗಳಲ್ಲಿ ಕಡಿಮೆ ದರದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಹಣ ಪಡೆಯುವ ಇಲಾಖೆ ಅಧಿಕಾರಿಗಳು ಕನಿಷ್ಠ ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸಲು ಕೊಠಡಿ ಕೂಡ ನಿರ್ಮಾಣ ಮಾಡಿಲ್ಲ. ಚಿತ್ರೀಕರಣ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಅವರೇ ತಂದ ತಾತ್ಕಲಿಕ ಟೆಂಟ್ನಲ್ಲಿ ಬಟ್ಟೆ ಬದಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.