ಮದ್ದೂರು: ‘ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ಉತ್ತರವನ್ನೇ ನೀಡುತ್ತಿದ್ದಾರೆ ಅವರ ಈ ಕ್ರಮಕ್ಕೆ ನಮ್ಮ ಬೆಂಬಲ ಸದಾ ಇರಲಿದೆ’ ಎಂದು ತಾಲ್ಲೂಕಿನ ಕೊಪ್ಪದ ಮುಸ್ಲಿಂ ಮುಖಂಡ ಇಮ್ರಾನ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಅವರು ಶುಕ್ರವಾರ ಕೊಪ್ಪದ ಮಸೀದಿಯ ಬಳಿ ಶುದ್ಧ ಕುಡಿಯುವ ನೀರಿನ ಕೇಂದ್ರಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ನಂತರ ಮಸೀದಿಯ ಒಳಗೆ ನಡೆದ ಕಾರ್ಯಕ್ರಮ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದoತೆಯೇ ಮುಸಲ್ಮಾನರು ಪಾಕಿಸ್ತಾನಕ್ಕೆ ಧಿಕ್ಕಾರ, ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ‘ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ನಮ್ಮ ಯೋಧರು ‘ಆಪರೇಷನ್ ಸಿಂಧೂರ’ದ ಮೂಲಕ ದಿಟ್ಟ ಉತ್ತರ ಕೊಡುತ್ತಿದ್ದಾರೆ. ಭಾರತೀಯ ಸೇನೆಯ ಒಬ್ಬ ಮುಸ್ಲಿಂ ಯುವತಿ ಪಾಕಿಸ್ತಾನಕ್ಕೆ ಹೋಗಿ ದಾಳಿ ನಡೆಸಿ ಬಂದಿರುವ ಯೋಧರಲ್ಲಿ ಒಬ್ಬರಾಗಿರುವುದು ಹೆಮ್ಮೆಯ ಸಂಗತಿ. ಈ ಮೂಲಕ ಭಾರತೀಯರೆಲ್ಲ ಒಂದೇ ಎಂಬ ಏಕತೆ ಸಾರಿದ್ದೇವೆ’ ಎಂದರು.

ಮುಸ್ಲಿಂ ಮುಖಂಡರಾದ ಇಮ್ರಾನ್ ಮಾತನಾಡಿ, ‘ಪಾಕಿಸ್ತಾನ ನಿರ್ನಾಮವಾಗಬೇಕು ಭಾರತದಲ್ಲಿನ ಮುಸ್ಲಿಮರು ಮೂಲ ಭಾರತೀಯರು ನಾವು ನಮ್ಮ ರಾಷ್ಟ್ರದಲ್ಲಿ ಸಹಬಾಳ್ವೆಯಿಂದ ಇದ್ದೇವೆ. ಅಗತ್ಯಬಿದ್ದರೆ ದೇಶಕ್ಕಾಗಿ ಪ್ರಾಣ ನೀಡಲೂ ಸಿದ್ಧ’ ಎಂದರು.

ಮುಸ್ಲಿಂ ಮುಖಂಡರಾದ ಸಲೀಮ್, ಇಮ್ರಾನ್ ಖಾನ್, ಮೊಹಮ್ಮದ್ ಆಸೀಫ್, ರಿಜ್ವಾನ್, ಫಾರುಖ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.