ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ

Published 3 ಆಗಸ್ಟ್ 2023, 16:04 IST
Last Updated 3 ಆಗಸ್ಟ್ 2023, 16:04 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಅನ್ವಯ ಮೈಷುಗರ್‌ ಕಾರ್ಖಾನೆಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ ನೀಡಲಾಗುವುದು. ರಾಜ್ಯ ಸರ್ಕಾರ ಆದೇಶ ಹೊರಡಿಸಿದ ತಕ್ಷಣವೇ ಹೆಚ್ಚುವರಿ ಮೊತ್ತವನ್ನು ಪಾವತಿ ಮಾಡಲಾಗುವುದು ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಕಾರ್ಖಾನೆಯು 2023-24ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಜೂನ್ 6ರಿಂದ ಆರಂಭಿಸಿತು. ರೈತರ ಸಹಕಾರದಿಂದ ಇಲ್ಲಿಯವರೆಗಗೆ 61,942 ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ. ಕಂಪನಿಯ ಏಳಿಗೆಗೆ ಕಬ್ಬು ಬೆಳೆಯುವ ರೈತರು ಸಹಕಾರ ನೀಡಬೇಕು. ತೊಂಡೆ, ಬೇರು ಮತ್ತು ತರಗನ್ನು ಸ್ವಚ್ಚಗೊಳಿಸಿ ಪಕ್ವತೆ ಹೊಂದಿದ ಗುಣಮಟ್ಟದ ತಾಜಾ ಕಬ್ಬನ್ನು ಮಾತ್ರ ಕಾರ್ಖಾನೆಗೆ ಪೂರೈಸಬೇಕು ಎಂದು ತಿಳಿಸಿದ್ದಾರೆ.

ಕಟಾವು ಮಾಡಿದ 24 ಗಂಟೆಯೊಳಗೆ ಸರಬರಾಜು ಮಾಡಿದರೆ ಒಳ್ಳೆಯದು, ಆಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಕಂಪನಿಯ ಶ್ರೇಯೋಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT