ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ‘ಪ್ರಭಾವತಿ ಎಚ್.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿ’, ‘ಶಾರದಮ್ಮ ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿ’, ‘ವೀಣಾ ಡಾ.ಎಂ.ಮಂಚಯ್ಯ ವೈದ್ಯಕೀಯ ಸೇವಾ ಪ್ರಶಸ್ತಿ’, ‘ರತ್ನಮ್ಮ ಕುನ್ನಮರಿಗೌಡ ಕೃಷಿ ಪ್ರಶಸ್ತಿ’ ಹಾಗೂ ‘ಡಾ.ಶಿವರಾಮಯ್ಯ ಕೃಷಿ ಪ್ರಶಸ್ತಿ’ ಪ್ರದಾನ ಸಮಾರಂಭವು ಕಾರ್ಯಕ್ರಮವು ಡಿ.8ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ (ಕಾನೂನು ಸೇವಾ ಪ್ರಶಸ್ತಿ, ₹20 ಸಾವಿರ), ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ (ಕೃಷಿ ಪ್ರಶಸ್ತಿ, ₹20 ಸಾವಿರ), ಮಂಡ್ಯ ತಾಲ್ಲೂಕಿನ ದೊಡ್ಡಬಾಣಸವಾಡಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಂಬಿಕಾ (ವೈದ್ಯಕೀಯ ಪ್ರಶಸ್ತಿ, ₹20 ಸಾವಿರ), ಕನಕಪುರ ತಾಲ್ಲೂಕಿನ ಪ್ರಗತಿಪರ ಕೃಷಿಕ ಬಿ.ಕೆ.ಪದ್ಮಾ (ಕೃಷಿ ಪ್ರಶಸ್ತಿ, ₹10, ಸಾವಿರ), ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಪ್ರಗತಿಪರ ಕೃಷಿಕ ಪ್ರೊ.ಎಂ.ಸಿ.ಬೋರೇಗೌಡ (ಕೃಷಿ ಪ್ರಶಸ್ತಿ, ₹10 ಸಾವಿರ) ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ವಕೀಲ ಪಿ.ಮಂಜುನಾಥ್ ಹಾಗೂ ಮಂಡ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ಜಿ.ಎಸ್. ಚೈತ್ರಾ ಅವರಿಗೆ ತಲಾ ₹5 ಸಾವಿರದೊಂದಿಗೆ ಫಲಕ ನೀಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಮ.ರಾಮಕೃಷ್ಣ ಅಭಿನಂದನಾ ನುಡಿಗಳನ್ನಾಡುವರು. ಅತಿಥಿಗಳಾಗಿ ಕನಕಪುರ ರೂರಲ್ ಎಜುಕೇಷನ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಪ್ರಭಾವತಿ ಹನುಮೇಗೌಡ ಭಾಗವಹಿಸುವರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.