ಕೆ.ಆರ್.ಪೇಟೆ: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ಯುವಕನ ಸಾವಿಗೆ ಪೋಲಿಸರ ವೈಫಲ್ಯವೇ ಕಾರಣವಾಗಿದ್ದು, ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ದಲಿತ ರೈತ ಜಯಕುಮಾರ್ ಮನೆಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು.

‘ಗ್ರಾಮದ ಯುವಕ ಜಯಕುಮಾರ್ ಸಾವು ವಿದ್ರಾವಕ ಘಟನೆಯಾಗಿದ್ದು, ಜಮೀನಿನ ವಿಚಾರವಾಗಿ ಗಲಾಟೆಯಾಗಿದ್ದು, ಜಯಕುಮಾರ್ ಸಾಯುವ ಮುನ್ನಾ ದಿನ ದೂರು ನೀಡಿದ್ದರೂ ಪೋಲೀಸರು ಯಾವುದೇ ಕ್ರಮ ವಹಿಸಲ್.ಲ ಹೀಗಾಗಿ ಈ ಕೃತ್ಯ ಕ್ಕೆ ಪೋಲಿಸರೇ ನೇರ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೃತನ ಪತ್ನಿ ಹೇಳುವ ಹಾಗೆ ಆರೋಪಿಯು ಮೆದೆಗೆ ಪೆಟ್ರೋಲ್ ಹಾಕಿ ಇಬ್ಬರನ್ನು ಕೊಲ್ಲುವುದಾಗಿ ಹೇಳಿದ್ದ. ಅದೇ ರೀತಿಯಲ್ಲಿ ಕೊಲೆಯಾಗಿದೆ. ಇದು ಆತ್ಮಹತ್ಯೆಯಲ್ಲ ಕೊಲೆ. ನಮ್ಮನ್ನು ಕಾಯಲು ನೇಮಿಸಿರುವ ಪೊಲೀಸರೇ ನಡೆಸಿರುವ ಕೃತ್ಯ’ ಎಂದು ಆರೋಪಿಸಿದರು,

ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಪೋಲಿಸ್ ಅದಿಕಾರಿಗಳ ವಿರುದ್ಧವೂ ಕಠಿಣ ಕ್ರಮವಾಗಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ರಾಜ್ಯಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಸರಣಿ ಹತ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಂತಹ ಕೃತ್ಯಗಳು ಹೆಚ್ಚಾಗಿವೆ. ಇದಕ್ಕೆ ಮುಸ್ಲಿಮರ ಬಗ್ಗೆ ತುಷ್ಟೀಕರಣ ನೀತಿಯೇ ಕಾರಣವಾಗಿದೆ’ ಎಂದು ಟೀಕಿಸಿದರು.

ಮಾಜಿ ಸಚಿವರಾದ ನಾರಾಯಣಗೌಡ, ಎನ್. ಮಹೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಾರಂಗಿ ನಾಗಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ರಾಮನಗರ ಜಿಲ್ಲಾ ಸಹ ಉಸ್ತುವಾರಿ ಕೆ.ಜೆ.ವಿಜಯಕುಮಾರ್, ಮುಖಂಡರಾದ ಕೆ.ಶ್ರೀನಿವಾಸ್, ಕೆ.ಬಿ. ನಂದೀಶ್, ಭಾರತೀಪುರ ಪುಟ್ಟಣ್ಣ, ಪುರಸಭಾ ಸದಸ್ಯ ಬಸ್ ಸಂತೋಷ್, ಡಿ.ಪ್ರೇಮಕುಮಾರ್, ಕರೋಟಿ ಅನಿಲ್, ಊಚನಹಳ್ಳಿ ನಟರಾಜು, ಸೋಮಸುಂದರ್,ಪಿ ಪ್ರವೀಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.