ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬಾಚಹಳ್ಳಿ | ಪ್ರಜಾವಾಣಿ ವರದಿಗೆ ಎಚ್ಚೆತ್ತು ಕೆರೆ ಏರಿ ದುರಸ್ತಿ: ಶ್ಲಾಘನೆ

Published : 18 ಆಗಸ್ಟ್ 2024, 12:50 IST
Last Updated : 18 ಆಗಸ್ಟ್ 2024, 12:50 IST
ಫಾಲೋ ಮಾಡಿ
Comments

ಸಂತೇಬಾಚಹಳ್ಳಿ: ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಈ ಹಿಂದೆ ಭಾರಿ ಮಳೆಗೆ 2023ರಲ್ಲಿ ಕೆರೆ ಏರಿ ಒಡೆದು ಹೋಗಿತ್ತು. ವರ್ಷವಾದರೂ ದುರಸ್ತಿ ಮಾಡಿರಲಿಲ್ಲ.

ಈ ಬಗ್ಗೆ ಜೂನ್ 15ರಂದು ‘ಕೆರೆ ದುರಸ್ತಿ ಯಾವಾಗ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ವರದಿಯನ್ನು ಗಮನಿಸಿದ ಶಾಸಕ ಎಚ್.ಟಿ.ಮಂಜು ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು. ಮಳೆಗಾಲ ಪ್ರಾರಂಭವಾದ ಕಾರಣ ಕೆರೆ ಕಟ್ಟೆಗಳಲ್ಲಿ ಜಾನುವಾರಿಗೆ ಕುಡಿಯಲು ನೀರು ಶೇಖರಣೆ ಮಾಡಬೇಕಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶೀಘ್ರದಲ್ಲಿ ಕೆರೆ ಏರಿ ದುರಸ್ತಿ ಮಾಡಬೇಕು ಎಂದು ಸೂಚಿಸಿದ್ದರು. ಅಧಿಕಾರಿಗಳು ಎಚ್ಚೆತ್ತು ಕೆರೆ ಏರಿ ದುರಸ್ತಿ ಮಾಡಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಕೆರೆ ಏರಿ ದುರಸ್ತಿ ಬಗ್ಗೆ ಪ್ರಕಟವಾದ ಲೇಖನವನ್ನು ಗಮನಿಸಿ ಶಾಸಕರು ಹಾಗೂ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಏರಿ ದುರಸ್ತಿಯಿಂದ ಗ್ರಾಮಕ್ಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಿದಂತಾಗಿದೆ. 13 ಎಕರೆ ಕೆರೆಯಲ್ಲೂ ನೀರು ಶೇಖರಣೆಯಾಗಿದೆ. ಇದರಿಂದ ರೈತರಿಗೆ ಸಂತಸವಾಗಿದೆ’ ಎಂದು ಗ್ರಾಮದ ಮುಖಂಡ ಎಂ.ಆರ್.ಚೇತನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT