‘ಗುಣಾತ್ಮಕ ಮತ್ತು ತಡೆರಹಿತ ವಿದ್ಯುತ್ ಪೂರೈಸಲೆಂದೇ ಸಿಬ್ಬಂದಿಯು ಮಳೆಯನ್ನು ಲೆಕ್ಕಿಸದೆ ಉಪಕರಣಗಳ ದುರಸ್ತಿ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡಗಿನ ಬೆಟ್ಟ–ಗುಡ್ಡಗಳಲ್ಲಿ ಕಡಿದಾದ ಕಣಿವೆ ಪ್ರದೇಶಗಳಲ್ಲಿ ಹರಸಾಹಸಪಟ್ಟಿದ್ದಾರೆ’ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ತಿಳಿಸಿದರು.