ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ರಂಗನತಿಟ್ಟು ಪಕ್ಷಿಧಾಮ ಇಂದಿನಿಂದ ಪ್ರವೇಶಕ್ಕೆ ಮುಕ್ತ

Last Updated 7 ಜೂನ್ 2020, 19:49 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕೊರೊನಾ ವೈರಸ್‌ ಕಾರಣದಿಂದ ಕಳೆದ 78 ದಿನಗಳಿಂದ ಬಂದ್‌ ಆಗಿದ್ದ ರಂಗನತಿಟ್ಟು ಪಕ್ಷಿಧಾಮ ಜೂ.8ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ಸೋಮವಾರ ಬೆಳಿಗ್ಗೆ 8.30ರಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆವರೆಗೆ ಪಕ್ಷಿ ವೀಕ್ಷಿಸಬಹುದಾಗಿದೆ. ದೋಣಿಗಳು, ಟಿಕೆಟ್‌ ಕೌಂಟರ್‌, ಪಾದಚಾರಿ ಮಾರ್ಗಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

‘ಸರ್ಕಾರದ ನಿರ್ದೇಶನ ಪಾಲನೆಯಾಗುವಂತೆ ನೋಡಿಕೊಳ್ಳಿ ಎಂದು ಪಕ್ಷಿಧಾಮದ ಎಲ್ಲ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ವನ್ಯಜೀವಿ ವಿಭಾಗದ ಡಿಎಫ್‌ಒ ಅಲೆಕ್ಸಾಂಡರ್‌ ತಿಳಿಸಿದ್ದಾರೆ.

‘65 ವರ್ಷ ಮೇಲ್ಟಟ್ಟ ಹಾಗೂ 10 ವರ್ಷ ಒಳಗಿನವರು ಮತ್ತು ಶೀತ, ಕೆಮ್ಮ, ಜ್ವರ ಇರುವವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಪಕ್ಷಿಧಾಮದ ಒಳಗೆ ವಾಹನ ತರುವಂತಿಲ್ಲ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ನಿಂದ ಕೈ, ಕಾಲು ತೊಳೆದು ಮಾಸ್ಕ್‌ ಧರಿಸಿ ಬರಬೇಕು. ನಿಗದಿತ ಮಾರ್ಗದಲ್ಲೇ ಪ್ರವೇಶಿಸಬೇಕು. ಪಾನ್‌ ಮಸಾಲ, ತಿಂಡಿ, ತಿನಿಸಿಗೆ ಅವಕಾಶ ಇರುವುದಿಲ್ಲ. ದೋಣಿಯ ಒಳಗೆ ಒಂದು ಸಾಲಿನಲ್ಲಿ ಒಬ್ಬರು ಮಾತ್ರ ಕೂರಬೇಕು’ ಎಂದು ಅವರು ತಿಳಿಸಿದ್ದಾರೆ.

ದೇವಾಲಯಗಳು ಮುಕ್ತ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ ಇರುತ್ತದೆ. ಗಂಜಾಂ ನಿಮಿಷಾಂಬಾ ದೇವಾಲಯದಲ್ಲಿ ಕೂಡ ಭಕ್ತರು ಬೆಳಿಗ್ಗೆ 8ರಿಂದ ದೇವರ ದರ್ಶನ ಮಾಡಬಹುದು. ಆದರೆ ತೀರ್ಥ, ಪ್ರಸಾದ, ಇತರ ಸೇವೆಗಳು ಇರುವುದಿಲ್ಲ ಎಂದು ದೇವಾಲಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಯ್ಯ ತಿಳಿಸಿದ್ದಾರೆ.

ಕರಿಘಟ್ಟ ಶ್ರೀನಿವಾಸ ದೇವಾಲಯದಲ್ಲಿ ಕೂಡ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.

ಬೃಂದಾವನಕ್ಕೆ ನಿಷೇಧ: ‘ಕೆಆರ್‌ಎಸ್‌ನ ಬೃಂದಾವನಕ್ಕೆ ಪ್ರವಾಸಿಗರಿಗೆ ಸೋಮವಾರದಿಂದ ಪ್ರವೇಶಕ್ಕೆ ಅವಕಾಶ ಇಲ್ಲ. ಈ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಎಇಇ ವಾಸುದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT