ಶ್ರೀರಂಗಪಟ್ಟಣ: ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಮತ್ತು ದೋಣಿ ವಿಹಾರ ಶುಲ್ಕವನ್ನು ಹೆಚ್ಚಿಸಲಾಗಿದೆ.

ಭಾರತೀಯರಿಗೆ ಪ್ರವೇಶ ಶುಲ್ಕ ₹ 75ರಿಂದ ₹80ಕ್ಕೆ, ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ₹25ರಿಂದ ₹40ಕ್ಕೆ ಏರಿಕೆಯಾಗಿದೆ. ವಿದೇಶಿಗರಿಗೆ ಪ್ರವೇಶ ಶುಲ್ಕ ₹500ರಿಂದ ₹600ಕ್ಕೆ ಹೆಚ್ಚಳವಾಗಿದೆ. ವಿದೇಶಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ₹250ರಿಂದ ₹300ಕ್ಕೆ ಏರಿಕೆಯಾಗಿದೆ.

ಭಾರತೀಯರಿಗೆ ಇದ್ದ ದೋಣಿ ವಿಹಾರದ ಶುಲ್ಕ ತಲಾ ₹100ರಿಂದ ₹130ಕ್ಕೆ, ವಿದೇಶಿಯರಿಗೆ ₹500ರಿಂದ ₹600ಕ್ಕೆ ಏರಿಕೆಯಾಗಿದೆ. ವಿಶೇಷ ದೋಣಿ ಬಳಸುವ ಭಾರತೀಯರ ಶುಲ್ಕ ₹2,000ದಿಂದ ₹2,500 ಹಾಗೂ ವಿದೇಶಿಯರ ಶುಲ್ಕ ₹3,500ರಿಂದ ₹4,000ಕ್ಕೆ ಹೆಚ್ಚಿಸಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.

ವಾಹನಗಳ ಪಾರ್ಕಿಂಗ್ ಶುಲ್ಕವೂ ಹೆಚ್ಚಾಗಿದೆ. ಬೈಕ್ಗೆ ₹15ರಿಂದ ₹20, ಕಾರು ಮತ್ತು ಜೀಪ್ಗೆ ₹60ರಿಂದ ₹70ಕ್ಕೆ ಹೆಚ್ಚಿಸಲಾಗಿದೆ.

‘2021–22ರಿಂದ ದರ ಪರಿಷ್ಕರಣೆಯಾಗಿರಲಿಲ್ಲ. ಐದು ವರ್ಷಗಳಿಗೊಮ್ಮೆ ಶುಲ್ಕ ಹೆಚ್ಚಿಸುವುದು ವಾಡಿಕೆ. ಆ.1ರಂದು ಶುಲ್ಕ ಪರಿಷ್ಕರಣೆಯ ಆದೇಶ ಬಂದಿದ್ದು, ಆ.8ರಿಂದ ಹೊಸ ದರ ಪಡೆಯಲಾಗುತ್ತಿದೆ’ ಎಂದು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ (ವನ್ಯಜೀವಿ ವಿಭಾಗ) ಸಯ್ಯದ್ ನದೀಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.