ಮಂಗಳವಾರ, ಫೆಬ್ರವರಿ 18, 2020
16 °C
ಸಂತೇಬಾಚಹಳ್ಳಿ ಗ್ರಾಮಕ್ಕೆ ಖಾಸಗಿ ಬಸ್‌ನಲ್ಲಿ ಬಂದು ಹಕ್ಕು ಚಲಾಯಿಸಿದ ಜನರು

ಸಂತೇಬಾಚಹಳ್ಳಿ: ಮುಂಬೈನಿಂದ ಬಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬಾಚಹಳ್ಳಿ: ಹೋಬಳಿ ವ್ಯಾಪ್ತಿಯ ವಿವಿಧ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಿಗ್ಗೆ ಮತ ಚಲಾವಣೆಯಲ್ಲಿ ಜನರು ಆಸಕ್ತಿ ತೋರದಿದ್ದರೂ ಸಂಜೆಯ ವೇಳೆಗೆ ಬಿರುಸಿನಿಂದ ಹಕ್ಕು ಚಲಾವಣೆ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಅಪ್ಪನಹಳ್ಳಿ ಗ್ರಾಮದ ಶತಾಯುಷಿ ಸಣ್ಣಮ್ಮ (107) ತಮ್ಮ ಮೊಮ್ಮಕ್ಕಳ ಸಹಾಯದಿಂದ ಅಪ್ಪನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 33ರಲ್ಲಿ ಮತದಾನ ಮಾಡಿದರು.

ಬೆಂಗಳೂರು ಮತ್ತು ಮುಂಬೈನಿಂದ ಸಂತೇಬಾಚಹಳ್ಳಿ ಗ್ರಾಮಕ್ಕೆ ಮತದಾರರು ಖಾಸಗಿ ಬಸ್‌ನಲ್ಲಿ ಬಂದು ಮತ ಚಲಾವಣೆ ಮಾಡಿದರು. ಮಾರೇನಹಳ್ಳಿ ಮತಗಟ್ಟೆಯಲ್ಲಿ ಜಿ.ಪಂ. ಸದಸ್ಯೆ ಜೆ.ಪ್ರೇಮಕುಮಾರಿ, ಮಾಜಿ ಜಿ.ಪಂ. ಸದಸ್ಯರಾದ ವಿ.ಮಂಜೇಗೌಡ, ಅಘಲಯ ಮಂಜುನಾಥ್, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಜಾನಕೀರಾಂ ಅಘಲಯದಲ್ಲಿ ಮತದಾನ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು