ಪ್ರಜಾವಾಣಿ ವಾರ್ತೆ

ಹಲಗೂರು: ‘ಲಯನ್ಸ್ ಕ್ಲಬ್ ವತಿಯಿಂದ ಭಾನುವಾರ (ಡಿ.29) ಚರ್ಮ ರೋಗ ಉಚಿತ ತಪಾಸಣಾ ಶಿಬಿರವನ್ನು ಅಯೋಜಿಸಲಾಗಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕ್ಲಬ್ ಅಧ್ಯಕ್ಷ ನಂದೀಪುರ ಕುಮಾರ್ ತಿಳಿಸಿದರು.

‘ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಹಿಂಭಾಗದ ಲಯನ್ಸ್ ಭವನದಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಬೆಂಗಳೂರು ಮೂಲದ ಚರ್ಮರೋಗ ತಜ್ಞ ಚಂದ್ರಶೇಖರ್ ತಪಾಸಣೆ ನಡೆಸಲಿದ್ದಾರೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಲರ್ಜಿ, ಮೊಡವೆ, ತೊನ್ನು, ಕೂದಲು ಉದುರುವಿಕೆ, ಉಗುರಿನ ಸಮಸ್ಯೆ, ಉಳಕಡ್ಡಿ/ಗಜಕರ್ಣ, ಮೈನವೆ, ಸೊರಿಯಾಸಿಸ್ ಸೇರಿದಂತೆ ಎಲ್ಲಾ ತರಹದ ಅಲರ್ಜಿಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಎಲ್. ಮಾದೇಗೌಡ, ಖಜಾಂಚಿ ಶಿವರಾಜು, ಕ್ಲಬ್ ಸದಸ್ಯರಾದ ಕೃಷ್ಣ, ಗುರುಸಿದ್ದು, ಎ.ಎಸ್.ದೇವರಾಜು, ಬಸವರಾಜು, ಜಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.