ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಾಲ್ಕು ದಿನ ನಡೆಯಲಿರುವ ದಸರಾ ಉತ್ಸವಕ್ಕೆ ಸೆ.25ರಂದು ಮಧ್ಯಾಹ್ನ ಕಿರಂಗೂರು ಬನ್ನಿ ಮಂಟಪದಲ್ಲಿ ಚಾಲನೆ ನೀಡಲಿದ್ದು, ಜಂಬೂ ಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಪಂಚ ಲೋಹದ ವಿಗ್ರಹ ಪ್ರಮುಖ
ಆಕರ್ಷಣೆಯಾಗಲಿದೆ.

ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಪಂಚ ಲೋಹದ ದೇವಿಯ ವಿಗ್ರಹವನ್ನು ಮರದ ಅಂಬಾರಿಯಲ್ಲಿ ಇಟ್ಟು ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತಿದೆ. ವಿಗ್ರಹ 250 ಕೆ.ಜಿ. ತೂಕವಿದ್ದು, ಮೂರೂವರೆ ಅಡಿ ಎತ್ತರವಿದೆ. ಪ್ರಸನ್ನ ವದನೆ ದೇವಿಯು ಅಷ್ಟಭುಜೆಯಾಗಿದ್ದು ಖಡ್ಗ, ಶಂಕ, ಚಕ್ರ, ಅಭಯ ಹಸ್ತ, ಪುಷ್ಪ ಬಾಣ, ಗದೆ ಮತ್ತು ತ್ರಿಶೂಲ ಧಾರಣಿಯಾಗಿದ್ದಾಳೆ. ಹಸನ್ಮುಖಿ ರೂಪದ ದೇವಿಯು ಸಿಂಹದ ಮೇಲೆ ಕಳಿತಿರುವ ಭಂಗಿಯಲ್ಲಿರುವ ಈ ವಿಗ್ರಹವನ್ನು ಶಿಲ್ಪಿಯು ಚಿತ್ತಾಕರ್ಷಕವಾಗಿ ತಯಾರಿಸಿದ್ದಾನೆ.

ಕುಂಭಕೋಣಂನಿಂದ ಬಂದ ವಿಗ್ರಹ: ಪಟ್ಟಣದಲ್ಲಿ 2008ರಲ್ಲಿ ದಸರಾ ಉತ್ಸವ ಪುನರಾರಂಭವಾಗಿದ್ದು, ಅಂದಿನಿಂದ ಪ್ರತಿ ವರ್ಷ ದಸರಾ ಉತ್ಸವದಲ್ಲಿ ಇದೇ ವಿಗ್ರಹವನ್ನು ಮೆರವಣಿಗೆ ಮಾಡಲಾಗುತ್ತಿದೆ. ಚಾಮುಂಡೇಶ್ವರಿ ದೇವಿಯ ಭಕ್ತರಾದ ಪಟ್ಟಣದ ತುಳಸಿ ಮನೆ ಸುರೇಶ್ ಎಂಬವರು ₹3 ಲಕ್ಷ ವೆಚ್ಚದಲ್ಲಿ ಈ ಪಂಚ ಲೋಹದ ವಿಗ್ರಹವನ್ನು
ಮಾಡಿಸಿಕೊಟ್ಟಿದ್ದಾರೆ.

ವಿಗ್ರಹವನ್ನು ದಸರಾ ಉತ್ಸವ ಮಾತ್ರವಲ್ಲದೆ ವಿಜಯ ದಶಮಿ ಉತ್ಸವ, ಯುಗಾದಿ ಮತ್ತು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಂತಹ ಮೆರವಣಿಗೆ
ಮಾಡಲಾಗುತ್ತದೆ.

ಮೈಸೂರು ಅರಮನೆಯ ಮರದ ಅಂಬಾರಿ: ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಕೂರಿಸುವ, ರಾಜ ಲಾಂಛನವುಳ್ಳ ಮರದ ಅಂಬಾರಿಯನ್ನು ಪ್ರತಿ ವರ್ಷ ಮೈಸೂರು ಅರಮನೆಯಿಂದ ಇಲ್ಲಿಗೆ ತರಲಾಗುತ್ತದೆ. ರಾಜ ಮನೆತನದವರು ತೇಗದ ಮರದಿಂದ ಇದನ್ನು ಮಾಡಿಸಿದ್ದು, ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ತಾಲೀಮಿನಲ್ಲಿ ಬಳಸಲಾಗುತ್ತದೆ. ಉತ್ಸವ ಮುಗಿದ ನಂತರ ಮತ್ತೆ ಅರಮನೆಗೆ ಮರಳಿಸಲಾಗುತ್ತದೆ.

‘650 ಕೆ.ಜಿ. ಅಂಬಾರಿ ಹೊರುವ ಮಹೇಂದ್ರ’

ಸೆ.25ರಂದು ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ಮಹೇಂದ್ರ ಆನೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗಲಿದೆ. ಈ ಆನೆಯು 400 ಕೆ.ಜಿ. ತೂಕದ ಮರದ ಅಂಬಾರಿ ಸೇರಿ ಒಟ್ಟು 650 ಕೆ.ಜಿ. ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಹೆಜ್ಜೆ ಹಾಕಲಿದೆ.

‘ಮಹೇಂದ್ರ ಆನೆಯ ಜತೆಗೆ ಸಾಗುವ ಎರಡು ಕುಮ್ಕಿ ಆನೆಗಳ ಹೆಸರು ಇನ್ನೂ ಅಂತಿಮವಾಗಿಲ್ಲ’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜ್ ಹೇಳಿದ್ದಾರೆ.

‘ಬನ್ನಿ ಮಂಟಪದಲ್ಲಿ ಪೂಜೆ’

‘ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಆನೆಯ ಮೇಲೆ ಪ್ರತಿಷ್ಠಾಪಿಸುವ ಮುನ್ನ ಕಿರಂಗೂರು ವೃತ್ತದ ಬಳಿಯ ಬನ್ನಿ ಮಂಟಪದಲ್ಲಿಟ್ಟು ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗುತ್ತದೆ. ಗಣಪತಿ ಪೂಜೆ, ಪುಣ್ಯಾಹ ವಾಚನ, ಗಂಗಾ– ಭಾಗೀರತಿ ಪೂಜೆ, ಷೋಡಶೋ ಪಚಾರ, ಬನ್ನಿ ವೃಕ್ಷ ಪೂಜೆ, ನಂದಿ ಧ್ವಜ ಪೂಜೆ, ಗಜ, ಅಶ್ವ ಪೂಜೆ, ಅಷ್ಟ ದಿಕ್ಪಾಲಕ ಬಲಿ ಇತರ ಕೈಂಕರ್ಯಗಳು ನಡೆಯುತ್ತವೆ. ಮಂಗಳಾಷ್ಟಕ ಫೂಜೆಯ ನಂತರ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ’ ಎಂಬುದು ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ ಶರ್ಮಾ ಅವರ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.