ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ಬಿರುಗಾಳಿ: ನೆಲ ಕಚ್ಚಿದ ಬಾಳೆ ಬೆಳೆ

Published 4 ಮೇ 2024, 14:19 IST
Last Updated 4 ಮೇ 2024, 14:19 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ರಾಂಪುರ, ಅರಕೆರೆ ಇತರೆಡೆ ಬಾಳೆ ಇತರ ಬೆಳೆಗೆ ತೀವ್ರ ಹಾನಿಯಾಗಿದೆ.

ರಾಂಪುರ ಗ್ರಾಮದ ಮುರಳಿ ಎಂಬವರ ಬಾಳೆ ತೋಟದಲ್ಲಿ ನೂರಾರು ಬಾಳೆ ಗಿಡಗಳು ಉರುಳಿ ಬಿದ್ದಿವೆ. ಗೊನೆ ಬಿಟ್ಟಿದ್ದ ಗಿಡಗಳು ನೆಲ ಕಚ್ಚಿವೆ. ಇನ್ನು ಕೆಲವೇ ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಬಾಳೆ ಕಾಯಿಗಳು ಮಣ್ಣುಪಾಲಾಗಿವೆ. ತಾಲ್ಲೂಕಿನ ಅರಕೆರೆ ಗ್ರಾಮದ ಶಂಕರ್‌ ಎಂಬವರು ಒಂದು ಎಕರೆಯಲ್ಲಿ ಬೆಳೆದಿರುವ ಬಾಳೆ ಬೆಳೆಯಲ್ಲಿ ಶೇ 50ರಷ್ಟು ಹಾನಿಗೀಡಾಗಿದೆ.

‘ಬಾಳೆ ಬೆಳೆಯಲು ₹40 ಸಾವಿರಕ್ಕೂ ಹೆಚ್ಚು ಖರ್ಚಾಗಿತ್ತು. ಒಂದೂವರೆ, ಎರಡು ತಿಂಗಳಲ್ಲಿ ಬಾಳೆ ಗೊನೆಗಳು ಕಟಾವಿಗೆ ಬರುತ್ತಿದ್ದವು. ಕೇವಲ 10 ನಿಮಿಷ ಬೀಸಿದ ಬಿರುಗಾಳಿಯಿಂದ ಅರ್ಧಕ್ಕಿಂತ ಹೆಚ್ಚು ಬಾಳೆ ಗಿಡಗಳು ಮುರಿದು ಬಿದ್ದಿವೆ’ ಎಂದು ಮುರಳಿ ತಿಳಿಸಿದರು.

ತಾಲ್ಲೂಕಿನ ಮೊಗರಹಳ್ಳಿ ಮರದ ರೆಂಬೆ ಮುರಿದು ರಸ್ತೆಗೆ ಬಿದ್ದಿದ್ದು, ಅದನ್ನು ತೆರವು ಮಾಡಿಸಲಾಯಿತು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೈಕ್‌ ಸವಾರರು ಅಪಾಯದಿಂದ ಪಾರಾಗಿದ್ದಾರೆ. ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ, ಮರಳಾಗಾಲ ಇತರೆ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ಅಲ್ಲಲ್ಲಿ ಬೀನ್ಸ್‌, ಹೀರೆಕಾಯಿ, ಟೊಮೆಟೊ ಮತ್ತು ಸೋರೆ ಬೆಳೆಗೆ ಹಾನಿಯಾಗಿದೆ.

‘ಬಿರುಗಾಳಿಯಿಂದ ಕೆಲವೆಡೆ ಬೆಳೆ ಹಾಳಾಗಿರುವ ಬಗ್ಗೆ ಮಾಹಿತಿ ಬಂದಿದೆ. ಪರಿಹಾರ ಕೋರಿ ರೈತರು ಅರ್ಜಿ ಸಲ್ಲಿಸಿದರೆ ಕಂದಾಯ ಇಲಾಖೆಗೆ ರವಾನಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT