ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಯುವಕನ ಭೀಕರ ಕೊಲೆ

Published 28 ನವೆಂಬರ್ 2023, 15:29 IST
Last Updated 28 ನವೆಂಬರ್ 2023, 15:29 IST
ಅಕ್ಷರ ಗಾತ್ರ

ಮದ್ದೂರು:ತಾಲ್ಲೂಕಿನ ಕುದರಗುಂಡಿ ಕಾಲೊನಿಯ ಮಲ್ಲಯ್ಯ ನಗರದಲ್ಲಿ ಯುವಕನೊಬ್ಬನನ್ನು ಸೋಮವಾರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಶಿವಾನಂದ (19) ಕೊಲೆಯಾದ ಯುವಕ. ಈತ ತನ್ನ ಕೊಠಡಿಯಿಂದ ಸೋಮವಾರ ರಾತ್ರಿಯಾದರೂ ಹೊರಗೆ ಬಂದಿರಲಿಲ್ಲ. ಆಗ ಮೊಬೈಲ್‌ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ಅನುಮಾನಗೊಂಡ ಕೊಠಡಿಯಲ್ಲಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ.

ಆತನ ಕುತ್ತಿಗೆಗೆ ಹಗ್ಗ ಬಿಗಿದು ನಂತರ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.

ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಶಿವಾನಂದ ಸೋಮವಾರ ಮನೆಯೊಂದರ ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದಾಗ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕೊಲೆಗೆ ಅನೈತಿಕ ಸಂಬಂಧ ಇರಬಹುದು ಎಂಬ ಶಂಕೆಯಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್‌ಪಿ ಕೃಷ್ಣಪ್ಪ ಭೇಟಿ ನೀಡಿದ್ದರು.

ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಶಿವಾನಂದ
ಶಿವಾನಂದ

ಮದ್ದೂರು:ತಾಲ್ಲೂಕಿನ ಕುದರಗುಂಡಿ ಕಾಲೊನಿಯ ಮಲ್ಲಯ್ಯ ನಗರದಲ್ಲಿ ಯುವಕನೊಬ್ಬನನ್ನು ಸೋಮವಾರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಾನಂದ (19) ಕೊಲೆಯಾದ ಯುವಕ. ಈತ ತನ್ನ ಕೊಠಡಿಯಿಂದ ಸೋಮವಾರ ರಾತ್ರಿಯಾದರೂ ಹೊರಗೆ ಬಂದಿರಲಿಲ್ಲ. ಆಗ ಮೊಬೈಲ್‌ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ಅನುಮಾನಗೊಂಡ ಕೊಠಡಿಯಲ್ಲಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಈತ ಮನೆಯ ಹಂತಕರು ಸೋಮವಾರ ಕೊಲೆಗೈದು ಪರಾರಿಯಾಗಿದ್ದಾರೆ ರಾತ್ರಿಯಾದರು ಯುವಕ ಮನೆಯಿಂದ ಹೊರಬಾರದೇ ಇದ್ದಾಗ ಹಾಗೂ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಅನುಮಾನಗೊಂದು ಸೋಮವಾರ ರಾತ್ರಿ ನೋಡಿದಾಗ ಕೊಠಡಿಯಲ್ಲಿ ಯುವಕನನ್ನು ಯಾರೋ ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಯುವಕನ ಕುತ್ತಿಗೆಗೆ ಅಗ್ಗ ಬಿಗಿದು ನಂತರ ಮಾರಕಾಸ್ತ್ರ ದಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಶಿವಾನಂದ ಸೋಮವಾರ ರಾತ್ರಿ ಮನೆಯೊಂದರ ಕೊಠಡಿಯಲ್ಲಿ ನಿದ್ರಿಸುತ್ತಿದ್ದುಈ ವೇಳೆ ದುಷ್ಕರ್ಮಿಗಳು ಕುತ್ತಿಗೆಗೆ ಹಗ್ಗ ಬಿಗಿದು ಮಾರಕಾಸ್ತ್ರ ದಿಂದ ದೇಹದ ನಾನಾ ಭಾಗದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಡಿವೈ ಎಸ್. ಪಿ ಕೃಷ್ಣಪ್ಪ ಭೇಟಿ ನೀಡಿದ್ದರು. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಗೈದು ಪರಾರಿಯಾಗಿರುವವರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT