ಮಂಡ್ಯ: ಜಿಲ್ಲೆಯಲ್ಲಿ ಪ್ರಾಚೀನ ಕಾಲದ ಮೂವತ್ತೊಂದು ವೀರಗಲ್ಲು ಶಾಸನಗಳನ್ನು ಕೆ.ಆರ್. ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಕಿರಣ್ಕುಮಾರ್ ಸಂಶೋಧನೆ ನಡೆಸಿ ಪತ್ತೆ ಹಚ್ಚಿದ್ದಾರೆ.

ಸ್ಮಾರಕ ಶಿಲ್ಪಗಳಿಗೆ ಸಂಬಂಧಿಸಿದಂತೆ ಅಪ್ರಕಟಿತ ವೀರಗಲ್ಲು ಶಾಸನಗಳಾಗಿವೆ. ಅದರಂತೆ ಗಂಗರ ಕಾಲದ 13 ಶಾಸನ, ಹೊಯ್ಸಳರ 13 ಶಾಸನ, ವಿಜಯನಗರ ಕಾಲದ 2, ನೊಳಂಬರ ಕಾಲದ 1, ಚೋಳರ ಕಾಲದ 2 ಶಾಸನ ಪತ್ತೆಯಾಗಿವೆ. ಈ ಜಿಲ್ಲೆಗೆ ಸಂಬಂಧಿಸಿದ ‘ಎಪಿಗ್ರಫಿ ಕರ್ನಾಟಕ’ ಸಂಪುಟ ಆರು ಮತ್ತು ಏಳರಲ್ಲಿ ಒಟ್ಟು 1065 ಶಾಸನಗಳು ದಾಖಲಾಗಿವೆ.

‘ಮಂಡ್ಯ ಜಿಲ್ಲೆಯ ಸ್ಮಾರಕ ಶಿಲ್ಪಗಳು’ ಎಂಬ ಪ್ರಬಂಧ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾನಿಲಯದಡಿ ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸಿ.ಇ. ಲೋಕೇಶ್ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕಿರಣ್ಕುಮಾರ್ ಶೋಧನೆ ನಡೆಸಿದ್ದಾರೆ.

ಹಳೆ ನಂದಿಪುರದಲ್ಲಿನ ಗಂಗರ ಕಾಲದ ತುರುಗೋಳು ಹೋರಾಟದ ಬಗ್ಗೆ ತಿಳಿಸುವ ಶಾಸನ (ಅಕ್ಷರಗಳು ಸವೆದಿವೆ), ಕೋಟಹಳ್ಳಿ ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಕಾಲದ ವೀರಗಲ್ಲು ಶಾಸನ (12ನೇ ಶತಮಾನ), ರಾಜನಹಳ್ಳಿ ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಶಾಸನ (ಅಕ್ಷರಗಳು ಸವೆದಿವೆ). ಅಲೇನಹಳ್ಳಿ ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಶಾಸನ (ಅಕ್ಷರಗಳು ಸವೆದಿವೆ). ಮಾವಿನಕೆರೆಯಲ್ಲಿ ಹೊಯ್ಸಳರ ಕಾಲದ ಹಾಗೂ ಬೋಳಮಾರನಹಳ್ಳಿ ವಿಜಯನಗರ ಕಾಲದ ಎರಡು ಶಾಸನ ದೊರೆತಿವೆ.

ಶ್ರೀರಂಗಪಟ್ಟಣ ಅಲಗೋಡು ತುರುಗೋಳ್ ಶಾಸನ ಹೊಯ್ಸಳರ ಕಾಲದ ಸಿದ್ಧೇಶ್ವರ ದೇವಾಲಯದ ಹಿಂಭಾಗ ಇರುವ ಶಾಸನ 12ನೇ ಶತಮಾನವೆಂದು ತಿಳಿದು ಬಂದಿದೆ. ಕೊಣನೂರು ಶಿವ ದೇವಾಲಯದ ಹತ್ತಿರ ಇರುವ ವೀರರ ಗುಡಿಯಲ್ಲಿ ಯುದ್ಧದ ಸನ್ನಿವೇಶ ತಿಳಿಸುವ ಹೊಯ್ಸಳರ ಕಾಲದ ಶಾಸನ, ಹಳ್ಳದ ಹೊಸಳ್ಳಿಯಲ್ಲಿ ಹೊಯ್ಸಳರ ಕಾಲದ ಶಾಸನ, ಶೆಟ್ಟಿಹಳ್ಳಿ ಗಂಗರ ತುರುಗೋಳ್ ಶಾಸನ ಸಂಶೋಧನೆಯಾಗಿವೆ.

ಪಣಕನಹಳ್ಳಿ ವಿಜಯನಗರ ಕಾಲದ ವೀರಗಲ್ಲು ಶಾಸನ ಯುದ್ಧದ ಮಾಹಿತಿಯನ್ನು ನೀಡುವ 15 ಮತ್ತು 16ನೇ ಶತಮಾನದ ಶಾಸನ, ಮಾಡ್ಲಾದಲ್ಲಿ ಹೊಯ್ಸಳರ ಕಾಲದ ತುರುಗೋಳ್ ಶಾಸನ, ಬೇಬಿ ಗ್ರಾಮದಲ್ಲಿ ಗಂಗರ ಕಾಲದ 9ನೇ ಶತಮಾನದ ಶಾಸನ ಹಾಗೂ ಹೊಯ್ಸಳರ ಕಾಲದ ಯುದ್ಧದ ಸನ್ನಿವೇಶ ತಿಳಿಸುವ ಶಾಸನ, ಕೆ.ಆರ್. ಪೇಟೆಯ ಸಾಸಲು ಗ್ರಾಮದಲ್ಲಿ ಗಂಗರ ಕಾಲದ 9ರಿಂದ 10ನೇ ಶತಮಾನಕ್ಕೆ ಸೇರಿದ ಎರಡು ಶಾಸನಗಳು ದೊರಕಿದೆ.

‘ಶಾಸನಗಳು ಇತಿಹಾಸದ ಕನ್ನಡಿ’

ನನ್ನ ಸಂಶೋಧನೆಯಲ್ಲಿ ಹೊಸದಾಗಿ ಮೂವತ್ತೊಂದು ಶಾಸನ ಪತ್ತೆಯಾಗಿದ್ದು ಸಂತಸ ತಂದಿದೆ. ಶಾಸನಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಶಾಸನ ಓದಲು ತುಮಕೂರು ವಿವಿಯ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ್ ಸಹಕರಿಸಿದರು. ಸಂಶೋಧನೆ ಸಂದರ್ಭದಲ್ಲಿ ಡಾ.ನಂಜುಂಡಸ್ವಾಮಿ ಸಂತೆಬಾಚಳ್ಳಿ ಡಾ.ಶಿವರಾಮ್ ಹವ್ಯಾಸಿ ಸಂಶೋಧಕ ಕಲೀಂ ಉಲ್ಲಾ ಸಹಾಯಕ ಪ್ರಾಧ್ಯಾಪಕ ಸತೀಶ್ ನೆರವಾದರು’ ಎಂದು ಸಹಾಯಕ ಪ್ರಾಧ್ಯಾಪಕ ಆರ್.ಕಿರಣ್ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.