ಕೆರಗೋಡು: ಗ್ರಾಮೀಣ-ನಗರ ವ್ಯಾಪ್ತಿಯಲ್ಲಿ ಹಸಿರು ಹೆಚ್ಚಿಸಲು ಮನೆಗೊಂದು ಮರ ಊರಿಗೊಂದು ವನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಸ್.ಸಿ. ಜ್ಯೋತಿ ಹೇಳಿದರು.

ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಸಿರು ಕರ್ನಾಟಕ ಯೋಜನೆಯಡಿ "ಮನೆಗೊಂದು ಗಿಡ ಊರಿಗೊಂದು ವನ ಅಭಿಯಾನ"ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರು ಕರ್ನಾಟಕ ಯೋಜನೆಯಡಿ ಅರಣ್ಯ ಇಲಾಖೆಯು ವಾರ್ಷಿಕ ಸುಮಾರು 1 ಕೋಟಿ ಸಸಿ ನೆಡುವುದು ಮತ್ತು ಮರ ಬೆಳೆಸುವ ಗುರಿ ಜತೆಗೆ ಸಿಲ್ವರ್, ಬೇವು, ಆಲ, ಹಲಸು, ಅರಳಿ, ತೇಗ, ನಿಂಬೆ ಸೇರಿದಂತೆ ಔಷಧಿಗುಣವುಳ್ಳ ಹತ್ತಾರು ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ.ಸಸಿ ಪಡೆದು ಪೋಷಿಸುವ ವ್ಯೆಕ್ತಿಗಳು ಮತ್ತು ಗ್ರಾಮಗಳನ್ನು ನೊಂದಣಿ ಮಾಡಿಸಿದರೆ ಒಂದು ವರ್ಷದ ಬಳಿಕ ಉತ್ತಮ ಪೋಷಣೆ ಮಾಡಿದವರಿಗೆ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪುರಸ್ಕಾರ, ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಶ್ರೀನಿವಾಸ್ಒಂದು ಲಕ್ಷ ಸಸಿಗಳನ್ನು ನೆಡುವ ವ್ಯವಸ್ಥೆಗೆ ಚಾಲನೆ ನೀಡಿದ್ದು, ಸಾರ್ವಜನಿಕರು ಪರಿಸರ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಗ್ರಾಮದ ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಸಸಿಗಳನ್ನು ಪೋಷಿಸಿ ಪುರಸ್ಕಾರಕ್ಕೆ ಭಾಜನರಾಗುವುದಾಗಿ ಪ್ರಮಾಣವಚನ ಸ್ವೀಕರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಬಳಿ ನೋಂದಣಿ ಮಾಡಿಸಿದರು.

ಜಿ.ಪಂ. ಸದಸ್ಯ ಎಚ್.ಎನ್. ಯೋಗೇಶ್, ಉಪ ವಲಯ ಅರಣ್ಯಾಧಿಕಾರಿ ಬೆಟ್ಟಯ್ಯ, ಅರಣ್ಯ ಪ್ರೇರಕರಾದ ದೇವರಾಜು, ಸುವರ್ಣ, ಅನನ್ಯ ಟ್ರಸ್ಟ್ ಅಧ್ಯಕ್ಷೆ ಅನುಪಮ, ವಿಶ್ವಜ್ಞಾನಿ ಸೇವಾ ಟ್ರಸ್ಟ್ ಅಧ್ಯಕ್ಷ ತಾಳಶಾಸನ ಮೋಹನ್, ಗ್ರಾ.ಪಂ. ಸದಸ್ಯರು, ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.