ಮಳವಳ್ಳಿ: ಮನರಂಜನೆ ಜೊತೆಗೆ ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆ ಇದೆ ಎಂದು ಆರಾಧ್ಯ ಬ್ರಿಗೇಡ್ ನ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ತಿಳಿಸಿದರು.

ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಆರಾಧ್ಯ ಜ್ಯೋತಿಷ್ಯ ಮತ್ತು ಪುರೋಹಿತರ ಸಂಘ ಸೇರಿದಂತೆ ವಿವಿಧ ಆರಾಧ್ಯ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ ಆರಾಧ್ಯ ಪ್ರೀಮಿಯರ್-9 ಆವೃತ್ತಿಯ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಸ್ತುತ ಒತ್ತಡಭರಿತ ಜೀವನದಲ್ಲಿ ಯೋಗ ಹಾಗೂ ಕ್ರೀಡೆ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಕ್ರೀಡೆಯಲ್ಲಿ ಗೆಲುವು ಸೋಲನ್ನು ಸಮನಾಗಿ ಸ್ವೀಕರಿಸಿಸುವುದರ ಜೊತೆಗೆ ಸ್ನೇಹ ಪೂರಕವಾಗಿ ವರ್ತಿಸಬೇಕು. ಇಂಥ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮೂಲಕ ಆರಾಧ್ಯ ಸಮುದಾಯದ ಯುವಕರು ಸಂಘಟಿತರಾಗುತ್ತಿದ್ದಾರೆ’ ಎಂದು ಹೇಳಿದರು.

ಆರಾಧ್ಯ ಜ್ಯೋತಿಷ್ಯ ಮತ್ತು ಪುರೋಹಿತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಂಚೇದೊಡ್ಡಿ ನಾಗಭೂಷಣ್ ಆರಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪೂಜೆ ಪುರಸ್ಕಾರಕ್ಕೆ ಮಾತ್ರ ಸೀಮಿತಗೊಳಿಸದೇ ಕ್ರೀಡೆಯ ಬಗ್ಗೆಯೂ ಯುವಕರಲ್ಲಿ ಆಶಕ್ತಿ ಮೂಡಿಸುವ ಉದ್ದೇಶದಿಂದ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ. ಕ್ರೀಡೆ ಜೊತೆಗೆ ಹಲವಾರು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಆಯೊಜಿಸಲಾಗುತ್ತಿದೆ’ ಎಂದರು.

ಹಿರಿಯ ಜೋತಿಷ್ಯಿ ಮಹೇಶ್ ಬುದ್ದಿ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಥಮ ಭಾರಿಗೆ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದರು.

ಪಂದ್ಯಾವಳಿಯಲ್ಲಿ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ನಂಜನಗೂಡು, ಹೆಚ್.ಡಿ ಕೋಟೆ, ಗುಡ್ಲುಪೇಟೆ, ಹುಣಸೂರು, ಆನೇಕಲ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಂಡಗಳು ಭಾಗವಹಿಸಿದ್ದವು.

ರಾಮನಗರ ಆರಾಧ್ಯ ಮಹಾಸಭಾ ಅಧ್ಯಕ್ಷ ಸಿದ್ದರಾಮಾರಾಧ್ಯ, ಆರಾಧ್ಯ ಯುವಜನ ಸಮಿತಿ ಅಧ್ಯಕ್ಷ ರೇವಣಾರಾಧ್ಯ, ಆರಾಧ್ಯ ಟೈಟಾನ್ಸ್ ತಂಡದ ಮಾಲೀಕ ಉಮೇಶ್ ಆರಾಧ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.