ಮದ್ದೂರು: ಬರಡು ಭೂಮಿಯಾಗಿದ್ದ ಜಿಲ್ಲೆಯನ್ನು ಸರ್. ಎಂ ವಿಶ್ವೇಶ್ವರಯ್ಯ ಅವರು ಹಚ್ಚ ಹಸಿರು ಜಿಲ್ಲೆಯಾಗಿಸಿದ ಮಹಾಪುರುಷ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ. ಸಿ.ಉಮಾಶಂಕರ್ ತಿಳಿಸಿದರು.

ವಳಗೆರೆಹಳ್ಳಿ ಗ್ರಾಮದಲ್ಲಿ ಸೋಮವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ 164ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದಾಗಿ ಸಾವಿರಾರು ಎಕರೆ ಬೇಸಾಯಕ್ಕೆ ನೀರು, ಬೆಂಗಳೂರು, ಮೈಸೂರು ನಗರಗಳು ಸೇರಿದಂತೆ ಹತ್ತಾರು ಜಿಲ್ಲೆಗಳಿಗೆ ಕುಡಿಯುವ ನೀರು ಸಿಗುವುದಕ್ಕೆ ಸಾಧ್ಯವಾಗಿದೆ ಎಂದರು.

ರೈತ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಅಂದು ಉನ್ನತ ವೈಜ್ಞಾನಿಕ ಯಂತ್ರೋಪಕರಣಗಳು ಇಲ್ಲದಿದ್ದರೂ ವಿಶ್ವೇಶ್ವರಯ್ಯ ಅವರ ಬುದ್ದಿವಂತಿಕೆ, ಪರಿಶ್ರಮದಿಂದ ಆಣೆಕಟ್ಟೆ ನಿರ್ಮಾಣವಾಯಿತು ಎಂದರು.

ತಾ.ಪಂ. ಮಾಜಿ ಸದಸ್ಯ ಚಿಕ್ಕಮರಿಯಪ್ಪ ಅವರನ್ನು ಗೌರವಿಸಲಾಯಿತು. ಪಂಚಾಯಿತಿ ಸದಸ್ಯರಾದ ವಿ.ಜೆ.ಸುನಿಲ್, ವಿ.ಎಚ್.ಶಿವಲಿಂಗಯ್ಯ, ಎಂಪಿಸಿಎಸ್ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ವಿ.ಕೆ.ಶ್ರೀನಿವಾಸ್, ರಾಜಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೇವಕುಮಾರ್, ರೈತ ಸಂಘದ ಮುಖಂಡರಾದ ಎಚ್.ಜಿ.ಪ್ರಭುಲಿಂಗ, ಉಮೇಶ್ ವೆಂಕಟೇಶ್, ಲಿಂಗರಾಜು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮನ್ವಯಾಧಿಕಾರಿ ತೇಜಾವತಿ, ಮುಖಂಡರಾದ ಸೋಂಪುರ ಉಮೇಶ್, ಎಂ.ವೀರಪ್ಪ, ಕೆಂಚಪ್ಪ, ವಿ.ಆರ್.ಸತೀಶ್ಕುಮಾರ್, ಮಹೇಶ್, ವಿ.ಎಂ.ರಮೇಶ್, ವಿಶ್ವಾಸ್, ಆರ್.ವಿ.ಅವಿನಂದನ್, ನಾಗ, ಸಂಪತ್ತು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.