ಶನಿವಾರ, ಮಾರ್ಚ್ 28, 2020
19 °C

ಮೃತ ಸಿದ್ದಿಕಿ ಜೊತೆ ಮಹಿಳೆ ಪ್ರಯಾಣ ಮಾಡಿಲ್ಲ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಡ್ಯ: ‘ಕೋವಿಡ್‌– 19ನಿಂದ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್‌ ಹುಸೇನ್‌ ಸಿದ್ದಿಕಿ ಹಾಗೂ ನಾಗಮಂಗಲ ಮಹಿಳೆ ಒಂದೇ ವಿಮಾನದಲ್ಲಿ ಪ್ರಮಾಣ ಮಾಡಿಲ್ಲ. ಟಿಕೆಟ್‌ ಹಾಗೂ ಇತರ ದಾಖಲಾತಿ ಪರಿಶೀಲನೆಯ ನಂತರ ಸತ್ಯ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಂಗಳವಾರ ಸ್ಪಷ್ಟಪಡಿಸಿದರು.

‘ಮಹಿಳೆ ಹಾಗೂ ಆಕೆಯ ಕುಟುಂಬದ ಇತರ ಆರು ಮಂದಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ್ದರು. ಸಿದ್ದಿಕಿ ಫೆ.29ರಂದು ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆದರೆ ಆ ವಿಮಾನದಲ್ಲಿ ನಾಗಮಂಗಲದ ಮಹಿಳೆ ಇರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ ನೆಗೆಟಿವ್‌: ‘ಜರ, ನೆಗಡಿ, ಕಫದಿಂದ ಬಳಲುತ್ತಿದ್ದ ನಾಗಮಂಗಲ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರ ಮಾದರಿ ಫಲಿತಾಂಶ ಬಂದಿದ್ದು ಕೋವಿಡ್‌ 19 ಪತ್ತೆಯಾಗಿಲ್ಲ, ನೆಗೆಟಿವ್‌ ವರದಿ ಬಂದಿದೆ. ವಿದೇಶದಿಂದ ಬಂದಿರುವ ಜಿಲ್ಲೆಯ 30 ಮಂದಿಯ ಮೇಲೆ ನಿಗಾ ವಹಿಸಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು