ನಾಗಮಂಗಲ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಹೇಳಿಕೆ ನೀಡಿರುವುದನ್ನು ಖಂಡಿಸಿ ನೂರಾರು ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಕುಮಾರಸ್ವಾಮಿ ಗೋ ಬ್ಯಾಕ್ ಘೋಷಣೆ ಕೂಗಿದರು.
ಪಟ್ಟಣದ ಟಿ.ಬಿ. ಬಡಾವಣೆಯಿಂದ ಮಿನಿ ವಿಧಾನಸೌಧದವರೆಗೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕುಮಾರ ಸ್ವಾಮಿ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಮಿನಿವಿಧಾನ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರಾದ ಪುಟ್ಟಮ್ಮ ಮಾಯಣ್ಣ, ‘ನಾವೇನು ಕುಮಾರಸ್ವಾಮಿ ಅವರನ್ನು ಹೊಸದಾಗಿ ನೋಡುತ್ತಿಲ್ಲ. ಎರಡು ಮೂರು ದಶಕದಿಂದ ಜೆಡಿಎಸ್ ಪಕ್ಷದಲ್ಲಿದ್ದಾಗಿನಿಂದಲೂ ನೋಡಿದ್ದೇವೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ನೀವು ಮಹಿಳೆಯರಿಗಾಗಿ ಏನನ್ನು ಮಾಡಿದ್ದೀರಾ? ಈಗ ಕಾಂಗ್ರೆಸ್ ಸರ್ಕಾರವು ಮಹಿಳೆಯರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ನೆರವಾಗುತ್ತಿರುವುದನ್ನು ಸಹಿಸದೇ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿರುವ ನಿಮಗೆ ಮಾನ, ಮರ್ಯಾದೆ ಇದೆಯೇ? ಯಾರೇ ಆಗಲೀ ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು’ ಎಂದರು.
‘ಜೊತೆಗೆ ನಾವು ಜೆಡಿಎಸ್ ಪಕ್ಷಕ್ಕಾಗಿ 40 ವರ್ಷ ಕಾರ್ಯಕರ್ತೆಯಾಗಿ ದುಡಿದು ಮಹಿಳೆಯರ ಪರವಾದ ಯೋಜನೆ ರೂಪಿಸುವಂತೆ ಮನವಿ ಮಾಡಿದಾಗ ಅಧಿಕಾರವಿಲ್ಲ ಎಂದು ಕೈಚೆಲ್ಲಿದವರು ನೀವು. ಮಹಿಳೆಯರಿಗಾಗಿ ಏನನ್ನು ಮಾಡಿದ್ದೀರಾ. ದೇವೇಗೌಡರು ಒಬ್ಬ ನಾಯಕರಾಗಿದ್ದು, ಅವರನ್ನು ಈಗಲೂ ಗೌರವಿಸುತ್ತೇವೆ. ಆದರೆ, ಅವರ ಮಕ್ಕಳಾದವರೂ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಯಾವ ಪಕ್ಷದವರಾದರೂ ಸಹ ಮಹಿಳೆಯರನ್ನು ಗೌರವಿಸುವುದು ಅತ್ಯಂತ ಮುಖ್ಯವಾಗಿದೆ’ ಎಂದರು.
ಗೀತಾ ದಾಸೇಗೌಡ ಮಾತನಾಡಿ, ‘ಕುಮಾರಸ್ವಾಮಿ ಅವರು ಈ ಹಿಂದೆಯೂ ಹಲವು ಬಾರಿ ಮಹಿಳೆಯರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ. ಈಗ ಗ್ಯಾರಂಟಿ ಯೋಜನೆಯಿಂದ ತಾಯಂದಿರು ಹಾದಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯು ಎಷ್ಟೋ ಕುಟುಂಬ ಮತ್ತು ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಅಲ್ಲದೇ ಈಗಾಗಲೇ ಒಮ್ಮೆ ಸ್ವಾಭಿಮಾನವನ್ನು ಕೆಣಕಿ ಪರಿಣಾಮ ಎದುರಿಸಿದ್ದೀರಾ. ಈ ಬಾರಿಯೂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವುದರಿಂದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಮಹಿಳೆಯರು ತಕ್ಕ ಪಾಠ ಕಲಿಸಬೇಕಾಗಿದೆ’ ಎಂದರು.
ಪಟ್ಟಣದ ಮರಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕುಮಾರಸ್ವಾಮಿ ಕುಮಾರಸ್ವಾಮಿ ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ವಸಂತಮಣಿ, ನೀಲಾಮೂರ್ತಿ, ದೀಪಿಕಾ, ಚಿಕ್ಕಮ್ಮ, ಪುಟ್ಟಮ್ಮ, ಚಂದ್ರಕಲಾ, ಸಾವಿತ್ರಮ್ಮ, ಪ್ರೇಮಮ್ಮ, ಶಾಂತಮ್ಮ, ಲಕ್ಷ್ಮಿ, ರಾಧಾ, ಶಾಂತಾ, ರುಕ್ಷಿಣಿ, ಮಮತಾ, ಗೀತಾ ಮತ್ತು ಮಹಿಳೆಯರು ಭಾಗವಹಿಸಿದ್ದರು.
Graphic text / Statistics - ನಾಗಮಂಗಲ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಹೇಳಿಕೆ ನೀಡಿರುವುದನ್ನು ಖಂಡಿಸಿ ಸಾವಿರಾರು ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಕುಮಾರಸ್ವಾಮಿ ಗೋ ಬ್ಯಾಕ್ ಘೋಷಣೆ ಕೂಗಿದರು. ಪಟ್ಟಣದ ಟಿ.ಬಿ.ಬಡಾವಣೆಯಿಂದ ಮಿನಿವಿಧಾನಸೌಧದವರೆಗೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ವತಿಯಿಂದ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೇ ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರಾದ ಪುಟ್ಟಮ್ಮ ಮಾಯಣ್ಣ ಅವರು ನಾವೇನು ಕುಮಾರಸ್ವಾಮಿ ಅವರನ್ನು ಹೊಸದಾಗಿ ನೋಡುತ್ತಿಲ್ಲ. ಎರಡು ಮೂರು ದಶಕದಿಂದ ಜೆಡಿಎಸ್ ಪಕ್ಷದಲ್ಲಿದ್ದಾಗಿನಿಂದಲೂ ನೋಡಿದ್ದೇವೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ನೀವು ಮಹಿಳೆಯರಿಗಾಗಿ ಏನನ್ನು ಮಾಡಿದ್ದೀರಾ. ಈಗ ಕಾಂಗ್ರೆಸ್ ಸರ್ಕಾರವು ಮಹಿಳೆಯರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ನೆರವಾಗುತ್ತಿರುವುದನ್ನು ಸಹಿಸದೇ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿರುವ ನಿಮಗೆ ಮಾನ ಮರ್ಯಾದೆ ಇದೆಯೇ? ಯಾರೇ ಆಗಲೀ ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಜೊತೆಗೆ ನಾವು ಜೆಡಿಎಸ್ ಪಕ್ಷಕ್ಕಾಗಿ 40 ವರ್ಷ ಕಾರ್ಯಕರ್ತೆಯಾಗಿ ದುಡಿದು ಮಹಿಳೆಯರ ಪರವಾದ ಯೋಜನೆ ರೂಪಿಸುವಂತೆ ಮನವಿ ಮಾಡಿದಾಗ ಅಧಿಕಾರಯಿಲ್ಲ ಎಂದು ಕೈಚೆಲ್ಲಿದವರು ನೀವು. ಮಹಿಳೆಯರಿಗಾಗಿ ಏನನ್ನು ಮಾಡಿದ್ದೀರಾ. ದೇವೇಗೌಡರು ಒಬ್ಬ ನಾಯಕರಾಗಿದ್ದು ಅವರನ್ನು ಈಗಲೂ ಗೌರವಿಸುತ್ತೇವೆ. ಆದರೆ ಅವರ ಮಕ್ಕಳಾದವರೂ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಯಾವ ಪಕ್ಷದವರಾದರೂ ಸಹ ಮಹಿಳೆಯರನ್ನು ಗೌರವಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು. ನಂತರ ಮಾತನಾಡಿದ ಗೀತಾದಾಸೇಗೌಡ ಅವರು ಕುಮಾರಸ್ವಾಮಿ ಅವರು ಈ ಹಿಂದೆಯೂ ಹಲವು ಬಾರಿ ಮಹಿಳೆಯರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ. ಈಗ ಗ್ತಾರಂಟಿ ಯೋಜನೆಯಿಂದ ತಾಯಂದಿರು ಹಾದಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯು ಎಷ್ಟೋ ಕುಟುಂಬ ಮತ್ತು ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಅಲ್ಲದೇ ಈಗಾಗಲೇ ಒಮ್ಮೆ ಸ್ವಾಭಜಮಾನವನ್ನು ಕೆಣಕಿ ಪರಿಣಾಮ ಎದುರಿಸಿದ್ದೀರಾ. ಈ ಬಾರಿಯೂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವುದರಿಂದ ಚುನಾವಣೆಯಲ್ಲಿ ಕುಮಾರ ಸ್ವಾಮಿ ಅವರಿಗೆ ಜಿಲ್ಲೆಯ ಮಹಿಳೆತರು ತಕ್ಕ ಪಾಠಕಲಿಸಬೇಕಾಗಿದೆ ಎಂದರು. ಅಲ್ಲದೇ ಪ್ರತಿಭಟನೆಯ ವೇಳೆ ಪಟ್ಟಣದ ಮರಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕುಮಾರ ಸ್ವಾಮಿ ಅವರ ವಿರುದ್ಧ ಧಿಕ್ಕಾರ ಕೂಗಿದ ಸಾವಿರಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕುಮಾರಸ್ವಾಮಿ ಗೋ ಬ್ಯಾಕ್ ಘೋಷಣೆಯನ್ನು ಕೂಗಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ವಸಂತಮಣಿ ನೀಲಾಮೂರ್ತಿ ದೀಪಿಕಾ ಚಿಕ್ಕಮ್ಮ ಪುಟ್ಟಮ್ಮ ಚಂದ್ರಕಲಾ ಸಾವಿತ್ರಮ್ಮ ಪ್ರೇಮಮ್ಮ ಶಾಂತಮ್ಮ ಲಕ್ಷೀ ರಾಧಾ ಶಾಂತಾ ರುಕ್ಷಿಣಿ ಮಮತಾ ಗೀತಾ ಮತ್ತು ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.