ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಮಾರಿಕಾಂಬಾ ಜಾತ್ರೆಗೆ ಶಾಸ್ತ್ರೋಕ್ತ ಚಾಲನೆ

ಮೊದಲ ದಿನವೇ ಹರಿದು ಬಂದ ಭಕ್ತ ಸಾಗರ, ಇಂದಿನಿಂದ ಕೋಟೆ ದೇವಸ್ಥಾನದಲ್ಲಿ ದೇವಿ ದರ್ಶನ
Last Updated 25 ಫೆಬ್ರುವರಿ 2020, 13:12 IST
ಅಕ್ಷರ ಗಾತ್ರ

ಶಿವಮೊಗ್ಗ: ಐದು ದಿನಗಳಕೋಟೆ ಮಾರಿಕಾಂಬಾ ದೇವಿ ಜಾತ್ರೆಗೆಸೋಮವಾರಮುಂಜಾನೆ ಶಾಸ್ತ್ರೋಕ್ತ ಚಾಲನೆ ನೀಡಲಾಯಿತು.

ದೇವಿಯ ತವರು ಗಾಂಧಿ ಬಜಾರ್‌ನ ನಾಡಿಗರ ಮನೆಯ ಮುಂದೆಅಲಂಕೃತ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನವೇ ಲಕ್ಷಾಂತರ ಜನರು ದೇವಿಯ ದರ್ಶನ ಪಡೆದರು.ಪೂಜೆ ಸಲ್ಲಿಸಿದರು.

ಬೆಳಗಿನ ಜಾವ ನಾಲ್ಕರ ಸಮಯಸಮೀಪಿಸುತ್ತಿದ್ದಂತೆ ವಿಶ್ವಕರ್ಮ ಸಮುದಾಯದ ಭಕ್ತರುದೇವಿಗೆ ತಿಲಕವಿಟ್ಟುಪೂಜೆ ಸಲ್ಲಿಸಿದರು. ಬ್ರಾಹ್ಮಣಸಮುದಾಯದ ಸೋಮಶೇಖರ್ ನಾಡಿಗ್ ಕುಟುಂಬ ಬಾಸಿಂಗತೊಡಿಸಿ ಅಗ್ರ ಪೂಜೆ ಸಲ್ಲಿಸಿದರು.
ಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಉಪಾಧ್ಯಕ್ಷರಾದ ಶ್ರೀನಿವಾಸ್, ಉಮಾಪತಿ, ಕಾರ್ಯದರ್ಶಿಡಿ.ಎಂ.ರಾಮಯ್ಯ, ಹನುಮಂತಪ್ಪ, ಪದಾಧಿಕಾರಿಗಳಾದ ಸುನೀಲ್, ಪ್ರಭಾಕರ್ ಹರೀಶ್ ಲಾಲ್. ಚಂದ್ರಶೇಖರ್, ಎನ್.ರವಿಕುಮಾರ್ ಪೂಜೆ ಸಲ್ಲಿಸಿದರು.

ದೇವಿಯ ದರ್ಶನಕ್ಕಾಗಿ ಮುಂಜಾನೆ ಮೂರರಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 6.30ಕ್ಕೆ ಸಾರ್ವಜನಿಕರ ದರ್ಶನಕ್ಕೆ ಅವಕಾಶನೀಡಲಾಯಿತು. ಬಿ.ಎಚ್.ರಸ್ತೆಯ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಿಂದ ಆರಂಭವಾದ ಸರದಿಗಾಂಧಿ ಬಜಾರ್ ಶಿವಪ್ಪ ನಾಯಕ ವೃತ್ತದಿಂದ ಸಾಗಿ ದೇವಿ ಮೂರ್ತಿ ತಲುಪುತ್ತಿತ್ತು. ಮತ್ತೊಂದು ಸರದಿಬಿ.ಬಿ.ರಸ್ತೆಯಿಂದ ರಾಮಣ್ಣ ಶೆಟ್ಟಿ ಪಾರ್ಕ್ ಮೂಲಕ ದೇವಿ ದರ್ಶನಕ್ಕೆ ತಲುಪುತ್ತಿತ್ತು. ಭಕ್ತರು ದೇವಿಗೆ ಮಡಿಲಕ್ಕಿಹಾಕಿಭಕ್ತಿ ಸಮರ್ಪಿಸಿದರು.ಮಕ್ಕಳನ್ನು ದೇವಿಯ ಮಡಿಲಲ್ಲಿ ಕೂರಿಸುವ ಮೂಲಕ ಒಳಿತಿಗಾಗಿ ಪ್ರಾರ್ಥಿಸಿದರು.ಆರಂಭದಲ್ಲಿ ನೂಕುನುಗ್ಗಲುಇತ್ತು.ಪೊಲೀಸರು ಮತ್ತು ಸಮಿತಿಯ ಸ್ವಯಂ ಸೇವಕರು ಸರದಿ ನಿಯಂತ್ರಿಸುತ್ತಾ ದೇವಿಯ ದರ್ಶನಕ್ಕೆ ಅನುಕೂಲಕಲ್ಪಿಸಿದರು.

ಈ ಸಮಯದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮೇಯರ್ ಸುವರ್ಣಾಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್‌, ತಹಶೀಲ್ದಾರ್ ಗಿರೀಶ್ ಮಾರಿಕಾಂಬೆಗೆಪೂಜೆ ಸಲ್ಲಿಸಿದರು. ಗಾಂಧಿ ಬಜಾರ್‌ನ ವಿವಿಧ ನಾಗರಿಕ ಸಂಘಟನೆಗಳು ಸರದಿ ಸಾಲಿನಲ್ಲಿದ್ದ ಭಕ್ತರಿಗೆ ನೀರು, ಮಜ್ಜಿಗೆ, ತಂಪುಪಾನೀಯ, ಪಾನಕ, ಮೊಸರನ್ನ, ಚಿತ್ರಾನ್ನ, ಸವತೇಕಾಯಿ ವಿತರಿಸಿದರು.

ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಲು ನಗರದ ಬಿ.ಎಚ್.ರಸ್ತೆ, ಬಿ.ಬಿ.ರಸ್ತೆ, ಗಾಂಧಿಬಜಾರ್, ಕೋಟೆ ರಸ್ತೆಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು.ದೇವಾಲಯದ ಸುತ್ತಲೂ ವಿವಿಧ ಸಮಗ್ರಿಗಳು,ತಿನಿಸುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಾಲ್ಕು ದಿನಗಳೂ ಈ ವ್ಯವಸ್ಥೆ ಮುಂದುವರಿಯಲಿದೆ.

ಎಲ್ಲೆಡೆ ಸಂಭ್ರಮ:ಜಾತ್ರೆಯ ಸಂಭ್ರಮ ಇಡೀ ನಗರದಲ್ಲಿ ಕಂಡು ಬರುತ್ತಿದೆ. ಹಲವು ಬೀದಿಗಳು ಹಸಿರು ತೋರಣಗಳಿಂದ ಕಂಗೊಳಿಸತ್ತಿವೆ. ಕೆಲವು ಬಡಾವಣೆಗಳ ಬಹುತೇಕ ಮನೆಗಳ ಮುಂದೆ ಶಾಮಿಯಾನ ಹಾಕಿಸಲಾಗಿದೆ.ದೂರದ ಊರುಗಳಿಂದ ನೆಂಟರಿಷ್ಟರು ಭಾರಿ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಇಡೀ ನಗರ ಜನಜಂಗುಳಿಯಿಂದ ತುಂಬಿತ್ತು. ಶಿವಮೊಗ್ಗಕ್ಕೆ ಬರುವ ಎಲ್ಲ ಬಸ್‌ಗಳೂ ಭರ್ತಿಯಾಗಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT