ಗುರುವಾರ , ಡಿಸೆಂಬರ್ 3, 2020
23 °C

₹ 1 ಕೋಟಿ ಮೌಲ್ಯದ ನಿವೇಶನ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರು ಕಬಳಿಸಿದ್ದ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿ, ಮುಡಾ ವಶಕ್ಕೆ ಪಡೆದಿದ್ದಾರೆ.

ನಗರದ ನಾರ್ತ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾದ ಹಳೇ ಬಡಾವಣೆಯಲ್ಲಿ 30/40 ಅಳತೆಯ ನಿವೇಶನ ಸಂಖ್ಯೆ-537/ಕೆ ಮತ್ತು 537/ಎಲ್ ಅನ್ನು ಮೋಸಿನ್ ತಾಜ್ ಎಂಬಾತ, ನಕಲಿ ದಾಖಲೆ ಸೃಷ್ಟಿಸಿಕೊಂಡು ನಗರಪಾಲಿಕೆಯಿಂದ ಖಾತೆ ಮಾಡಿಸಿಕೊಂಡಿದ್ದರು. ಜೊತೆಗೆ ನಿವೇಶನಗಳ ಸುತ್ತಲೂ ಗೋಡೆ ನಿರ್ಮಿಸಿದ್ದರು.

ಇದನ್ನು ತಿಳಿದ ಅಧಿಕಾರಿಗಳು ಆಯುಕ್ತರ ನಿರ್ದೇಶನದ ಮೇರೆಗೆ, ಸಮರ್ಪಕ ದಾಖಲೆಗಳೊಂದಿಗೆ ನರಸಿಂಹರಾಜ ಪೊಲೀಸ್ ಠಾಣೆಯ ಸಿಬ್ಬಂದಿಯ ಭದ್ರತೆಯಲ್ಲಿ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿದರು. ಇದರ ಮೌಲ್ಯ ₹ 1 ಕೋಟಿ.

ನಿವೇಶನ ತೆರವು ಕಾರ್ಯದಲ್ಲಿ ವಲಯ ಅಧಿಕಾರಿ ಜಿ.ಮೋಹನ್, ಎಚ್.ಎನ್.ರವೀಂದ್ರಕುಮಾರ್, ಸರ್ವೇಯರ್‌ಗಳು ಹಾಗೂ ಸಂಬಂಧಪಟ್ಟ ಸಹಾಯಕ/ಕಿರಿಯ ಎಂಜಿನಿಯರ್‌ಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು