ಶನಿವಾರ, ಫೆಬ್ರವರಿ 22, 2020
19 °C

ಭಾರತೀಯರಿಗೆ ರಕ್ಷಣೆ ನೀಡಿ: ಅಮೆರಿಕಾದಲ್ಲಿ ಗುಂಡಿಗೆ ಬಲಿಯಾದ ಅಭಿಷೇಕ್‌ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನನ್ನ ಮಗನಿಗೆ ಆದ ಸ್ಥಿತಿ ಮತ್ತಾರಿಗೂ ಆಗಬಾರದು. ಇಲ್ಲಿಂದ ಸಾಲ ಮಾಡಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತೇವೆ. ಅವರ ರಕ್ಷಣೆ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ ಅವರ ತಂದೆ ಸುದೇಶ್ ಚಂದ್ ಆಗ್ರಹಿಸಿದರು.

ದೇಹದ ಮರಣೋತ್ತರ ಪರೀಕ್ಷೆ ನಡೆಯುವುದಕ್ಕೆ ಇನ್ನೂ 8 ದಿನಗಳು ಆಗಲಿವೆ. ಗುಂಡಿನ ದಾಳಿ ಏಕಾಯಿತು, ಯಾರು ಮಾಡಿದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅಭಿಷೇಕ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಅಭಿಷೇಕ್‌ ‌ಮೃತದೇಹವನ್ನು ಇಲ್ಲಿಗೆ ಕಳುಹಿಲಾಗುವುದಿಲ್ಲ. ಹಾಗಾಗಿ, ಕುಟುಂಬದ ಸದಸ್ಯರು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು