ಮಂಗಳವಾರ, ನವೆಂಬರ್ 24, 2020
26 °C

ಸರಣಿ ಅಪಘಾತ: ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಮೇಟಗಳ್ಳಿಯ ರಿಂಗ್ ರಸ್ತೆಯಲ್ಲಿ ಮಂಗಳವಾರ ಸರಣಿ ಅಪಘಾತ ನಡೆದಿದೆ. ಅಪಘಾತದಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರೆ, ಇಬ್ಬರಿಗೆ ಸಣ್ಣ ಗಾಯಗಳಾಗಿವೆ. ಮೂವರು ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಬಿ.ಎಂ.ಶ್ರೀ. ನಗರದ ಮೋಹನ್ (28) ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಲವತ್ತ ಗ್ರಾಮದ ಸುರೇಶ್ (23), ಕ್ಯಾತಮಾರಹಳ್ಳಿಯ ಸತೀಶ್ ಸಹ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್‌ನಲ್ಲಿ ಬೆಲವತ್ತ ಗ್ರಾಮದತ್ತ ಹೋಗುತ್ತಿದ್ದ ಸತೀಶ್ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಕಾರು ಗುದ್ದಿದೆ. ನಂತರ ಮೋಹನ್ ಮತ್ತು ಸುರೇಶ್ ಚಲಿಸುತ್ತಿದ್ದ ಸ್ಕೂಟರ್‌ಗೂ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಮೋಹನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಹಿಂಬದಿ ಸವಾರ ಸುರೇಶ್ ಮತ್ತು ಮತ್ತೊಂದು ಬೈಕ್ ಸವಾರ ಸತೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವಿ.ವಿ.ಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.