ಶನಿವಾರ, ಆಗಸ್ಟ್ 13, 2022
26 °C

ಮೈಸೂರು: ಬಾರ್‌, ರೆಸ್ಟೋರೆಂಟ್‌ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಮೈಸೂರು: ‌ಜಿಲ್ಲೆಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು, ಮೊದಲ ದಿನ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಮಾಲೀಕರು ಹಾಗೂ ಮದ್ಯಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲ ಬಾರ್‌ಗಳಲ್ಲಿ ಸಂಜೆ ವೇಳೆಗೆ ಗ್ರಾಹಕರ ಸಂಖ್ಯೆ ಹೆಚ್ಚಿದ್ದು ಕಂಡುಬಂತು.

‘ಕೊನೆಗೂ ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ. ಬಾರ್‌ಗಳ ಮಾಲೀಕರು ತುಂಬಾ ಕಷ್ಟಕ್ಕೆ ಸಿಲುಕಿದ್ದರು. ಬಾಗಿಲು ತೆರೆದಿದ್ದರೂ ಗ್ರಾಹಕರು ಹೆಚ್ಚಾಗಲು ಇನ್ನೂ ಸಮಯಬೇಕಾಗುತ್ತದೆ. ಜೊತೆಗೆ ಜನರ ಬಳಿಯೂ ಹಣ ಇಲ್ಲವಾಗಿದೆ. ಜೊತೆಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ’ ಎಂದು ಮೈಸೂರು–ಚಾಮರಾಜನಗರ ಮಧ್ಯ ವರ್ತಕರ ಸಂಘದ ಅಧ್ಯಕ್ಷ ಎಸ್‌.ಗುರುಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆಲ ಬಾರ್‌ಗಳಲ್ಲಿ ಉಚಿತವಾಗಿ ಮಾಸ್ಕ್‌ ವಿತರಿಸುತ್ತಿದ್ದದ್ದು ಕಂಡುಬಂತು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಇಡಲಾಗಿತ್ತು. ಟೇಬಲ್‌ಗಳನ್ನು ದೂರ ದೂರ ಇಟ್ಟು ಅಂತರ ಕಾಯ್ದುಕೊಳ್ಳಲಾಗಿದೆ.

ಕೋವಿಡ್‌–19 ಕಾರಣ ಲಾಕ್‌ಡೌನ್‌ ಜಾರಿ ಆದಾಗಿನಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಈ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.

ಮೈಸೂರು ಜಿಲ್ಲೆಯಲ್ಲಿ 225 ಬಾರ್‌ ಮತ್ತು ರೆಸ್ಟೋರೆಂಟ್‌ಗಳಿವೆ. ಲಾಡ್ಜ್‌ಗಳಲ್ಲಿರುವ ಬಾರ್‌ ಮತ್ತು ರೆಸ್ಟೋರೆಂಟ್‌ 50 ಹಾಗೂ 200ಕ್ಕೂ ಅಧಿಕ ಮದ್ಯದಂಗಡಿಗಳಿವೆ. ಸುಮಾರು 35 ಕ್ಲಬ್‌ಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು