ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ನಗರದಲ್ಲಿ ಹೆಚ್ಚುತ್ತಿದೆ ಸರಗಳ್ಳರ ಹಾವಳಿ

ಏಳೇ ದಿನಗಳಲ್ಲಿ ಮೂರು ಕಡೆ ಸರಗಳ್ಳರ ಕೈಚಳಕ
Last Updated 19 ಆಗಸ್ಟ್ 2020, 5:47 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸರಗಳ್ಳತನ ಮುಂದುವರೆದಿದೆ. ಈ ಬಾರಿ ಕೆ.ಆರ್.ಮೊಹಲ್ಲಾದ ಸೀತಾರಾಮರಾವ್ ರಸ್ತೆಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುಚಿತ್ರಾ ಎಂಬುವರು ರಾತ್ರಿ 9.30ರಲ್ಲಿ ತಮ್ಮ ಮನೆಯ ಸಾಕು ನಾಯಿಯನ್ನು ಕರೆದುಕೊಂಡು ಸೀತಾರಾಮರಾವ್ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ಇಬ್ಬರು ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.

ಇವರಲ್ಲಿ ಒಬ್ಬಾತ ಮುಖಕ್ಕೆ ಮಾಸ್ಕ್ ಧರಿಸಿದ್ದರೆ, ಮತ್ತೊಬ್ಬ ಮಂಕಿ ಕ್ಯಾಪ್‌ ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 12ರಂದು ಜೆ.ಪಿ.ನಗರದ ‘ಡಿ’ ಬ್ಲಾಕ್‌ನ 18ನೇ ಮುಖ್ಯರಸ್ತೆಯಲ್ಲಿ, 13ರಂದು ಶ್ರೀರಾಂಪುರದ 2ನೇ ಹಂತದ 1ನೇ ಮುಖ್ಯರಸ್ತೆಯಲ್ಲಿ ಇದೇ ಸ್ವರೂಪದಲ್ಲಿ ಸರಗಳ್ಳತನ ನಡೆದಿತ್ತು.

ವ್ಯಕ್ತಿ ಆತ್ಮಹತ್ಯೆ

ಮೈಸೂರಿನವಿಜಯನಗರದ ರೈಲ್ವೆ ಬಡಾವಣೆ 18ನೇ ಕ್ರಾಸ್‌ನ ನಿವಾಸಿ ಸಿದ್ದಪ್ಪಾಜಿ ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಇವರು ಅನಾರೋಗ್ಯದಿಂದ ಬಳಲುತ್ತಿದ್ದುದ್ದರಿಂದ ಬೇಸರಗೊಂಡು ಕಬ್ಬಿಣದ ಕಂಬಿಗೆ ನೇಣು ಹಾಕಿಕೊಂಡಿದ್ದಾರೆ ಎಂದು ವಿಜಯನಗರ ಠಾಣೆಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT