ಭಾನುವಾರ, ಆಗಸ್ಟ್ 9, 2020
21 °C

ಕೋವಿಡ್‌: ಮನುಷ್ಯತ್ವ ಇರುವವರು ಹಣ ಹೊಡೆಯಲ್ಲ –ಸಿದ್ದರಾಮಯ್ಯಗೆ ಸಚಿವರ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸಿದ್ದರಾಮಯ್ಯ ಅವರು ಮೈಸೂರಿನ ತೋಟದ ಮನೆಯಲ್ಲಿ ಕುಳಿತು ಏನೇನೋ ಮಾತನಾಡುವುದು ಅಲ್ಲ. ವಿಧಾನಸೌಧಕ್ಕೆ ಬಂದು ದಾಖಲೆ ಪರಿಶೀಲನೆ ನಡೆಸಲಿ’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿರುಗೇಟು ನೀಡಿದರು.

ಕೋವಿಡ್‌ ಸನ್ನಿವೇಶದಲ್ಲಿ ಮನುಷ್ಯತ್ವ ಇರುವ ಯಾರೂ ದುಡ್ಡು ಹೊಡೆಯುವ ಕೆಲಸಕ್ಕೆ ಕೈ ಹಾಕಲ್ಲ. ಆರಂಭದಲ್ಲಿ ಪರಿಕರಗಳ ಬೆಲೆ ಹೆಚ್ಚಿತ್ತು. ಈಗ ಸ್ಪರ್ಧೆ ಇರುವ ಕಾರಣ ದರ ಕಡಿಮೆ ಆಗಿದೆ. ‌ರಾಜ್ಯದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ಇರುತ್ತದೆ ಎಂದು ನುಡಿದರು.

‘ಕೋವಿಡ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಡಲು ನಮ್ಮ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷದ ನಾಯಕರೂ ಕೇಳಬಹುದು’ ಎಂದರು.

ಕಳೆದ ನಾಲ್ಕೈದು ತಿಂಗಳಿನಿಂದ ಕೋವಿಡ್‌–19 ನಿರ್ವಹಣೆಗಾಗಿ ರಾಜ್ಯ ಸರ್ಕಾರ ಖರ್ಚು ಮಾಡಿರುವುದು ₹ 554 ಕೋಟಿ ಮಾತ್ರ. ಆದರೆ, ಸಿದ್ದರಾಮಯ್ಯ ಅವರು ₹ 2,300 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅದ್ಯಾಗೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು