ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಕ್ಷಣವುಳ್ಳವರು ಪರೀಕ್ಷೆಗೆ ಒಳಪಡಬೇಕು: ಜಿಲ್ಲಾಧಿಕಾರಿ

Last Updated 4 ಜೂನ್ 2020, 10:36 IST
ಅಕ್ಷರ ಗಾತ್ರ

ಮೈಸೂರು: ಜ್ವರ, ನೆಗಡಿ ಮೊದಲಾದ ಕೋವಿಡ್ ಲಕ್ಷಣವುಳ್ಳವರು ತಮ್ಮ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

ಖಾಸಗಿ ಆಸ್ಪತ್ರೆಯವರಿಗೂ ಈ ಕುರಿತು ಸೂಚನೆ ನೀಡಲಾಗಿದೆ. ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಪರೀಕ್ಷೆಗೆ ಜನರು ತಮ್ಮ ಗಂಟಲು ದ್ರವ ನೀಡಬಹುದು. ನಿತ್ಯ ಜಿಲ್ಲೆಯಲ್ಲಿ 450ರಿಂದ 500 ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರ ಬಿಟ್ಟು ಉಳಿದ ರಾಜ್ಯದವರನ್ನು ಹೋಂಕ್ವಾರಂಟೈನ್‌ಗೆ ಒಳಪಡಿಸಲು ಸರ್ಕಾರ ಸೂಚನೆ ನೀಡಿದೆ. ನಮ್ಮಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಹೊರರಾಜ್ಯದಿಂದ ಬಂದಿದ್ದರೂ, ಇವರಲ್ಲಿ ಬಹುತೇಕ ಮಂದಿ ತಮಿಳುನಾಡು ಮತ್ತು ಕೇರಳದವರೇ ಆಗಿದ್ದಾರೆ. ಮುಂಬೈನಿಂದ ನೋಂದಣಿಯಾಗಿದ್ದ 400 ಮಂದಿಯ ಪೈಕಿ ಕೇವಲ 200 ಮಂದಿಯಷ್ಟೇ ಬಂದಿದ್ದಾರೆ. ಬುಧವಾರ ಪತ್ತೆಯಾದ ಸೋಂಕಿತ ಮಹಿಳೆಯು ಗರ್ಭಿಣಿಯಾದ್ದರಿಂದ ‘ಹೋಂಕ್ವಾರಂಟೈನ್‌’ಗೆ ಒಳಪಡಿಸಲಾಗಿತ್ತು. ಈಗ ಅವರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT