ಸೋಮವಾರ, ಆಗಸ್ಟ್ 8, 2022
22 °C
ಸಿಟ್ಟಿನ ಭರದಲ್ಲಿ ಮಚ್ಚು ಬೀಸಿದ ಅಪ್ಪ

ಅನ್ಯಜಾತಿಯ ಯುವಕನೊಂದಿಗೆ ಪ್ರೀತಿ; ಮಗಳ ಕುತ್ತಿಗೆ ಸೀಳಿ ಕೊಂದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ (ಮೈಸೂರು): ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಶುಕ್ರವಾರ ಕೊಲೆ ಮಾಡಿದ್ದು, ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ಪಟ್ಟಣದ ಜಯರಾಮ್‌ ಆರೋಪಿ. ಗಾಯತ್ರಿ (19), ಮೃತಪಟ್ಟ ಯುವತಿ.

ಸುಮಾರು ಒಂದು ತಿಂಗಳಿನಿಂದಲೂ, ಮಗಳ ಪ್ರೀತಿಯ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಗಾಯತ್ರಿ ಊಟವನ್ನು ತಂದಿದ್ದಾಳೆ. ಈ ವೇಳೆ, ಬೇರೆ ಜಾತಿಯ ಯುವಕನನ್ನು ಪ್ರೀತಿಸುವುದು ಬೇಡ ಎಂದು ಜಯರಾಮ್ ಹೇಳಿದ್ದಾನೆ.

ಈ ಮಾತಿಗೆ ಒಪ್ಪದ ಗಾಯತ್ರಿ, ತಂದೆಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಜೊತೆಗೆ, ’ಪ್ರೀತಿಸುವುದನ್ನು ಮುಂದುವರಿಸಿದರೆ ಏನು ಮಾಡುತ್ತೀಯ?’ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಜಯರಾಮ್, ಪಕ್ಕದಲ್ಲೇ ಇದ್ದ ಮಚ್ಚನ್ನು ತೆಗೆದು ಮಗಳತ್ತ ಬೀಸಿದ್ದಾನೆ. ಏಟಿನಿಂದ ತಪ್ಪಿಸಿಕೊಳ್ಳಲು, ಆಕೆ ಅಡ್ಡವಾಗಿ ಕೈಯನ್ನು ಹಿಡಿದುಕೊಂಡರೂ, ಮಚ್ಚು ಕುತ್ತಿಗೆಯನ್ನು ಸೀಳಿದೆ.

ಸ್ಥಳದಲ್ಲೇ ಮೃತಪಟ್ಟ ಮಗಳನ್ನು ಕಂಡು ದಿಗ್ಭ್ರಾಂತನಾದ ಜಯರಾಮ್, ನೇರ ಪೊಲೀಸ್ ಠಾಣೆಗೆ ಬಂದು ಸಿಟ್ಟಿನ ಭರದಲ್ಲಿ ಆದ ಅನಾಹುತವನ್ನು ವಿವರಿಸಿ, ಶರಣಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್, ಇನ್‌ಸ್ಪೆಕ್ಟರ್‌ಗಳಾದ ಜಗದೀಶ್, ಬಿ.ಆರ್.ಪ್ರದೀಪ್, ಪಿಎಸ್ಐ ಸದಾಶಿವತಿಪರೆಡ್ಡಿ, ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು