ಗುರುವಾರ , ಜುಲೈ 29, 2021
26 °C
ಕುವೆಂಪು ಉದ್ಯಾನದಲ್ಲಿ ಡಾ.ದೇಜಗೌ 102ನೇ ಜನ್ಮ ದಿನಾಚರಣೆ

ಕನ್ನಡವನ್ನೇ ಉಸಿರಾಡಿದ ದೇಜಗೌ: ಡಾ.ವೈ.ಡಿ.ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಜಗೌ ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದ ಮೇರು ಪುರುಷರಲ್ಲಿ ಒಬ್ಬರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.

ಬೇರು ಫೌಂಡೇಷನ್ ವತಿಯಿಂದ ನಗರದ ಗನ್‌ಹೌಸ್ ವೃತ್ತದಲ್ಲಿರುವ ಕುವೆಂಪು ಉದ್ಯಾನದಲ್ಲಿ ಸೋಮವಾರ ಡಾ.ದೇಜಗೌ 102ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಜವರೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ತಮ್ಮ ಅಪೂರ್ವ ಕನ್ನಡ ನಿಷ್ಠೆ, ಕನ್ನಡ ಪ್ರೀತಿ ಮತ್ತು ಕನ್ನಡದ ಬಗೆಗಿನ ಬದ್ಧತೆಯಿಂದ ಕನ್ನಡವೆಂದರೇ ಕುವೆಂಪು ಎನ್ನುವ ಹಾಗೆ, ದೇಜಗೌ ಕೂಡ ಸ್ಮರಣೀಯರು’ ಎಂದರು.

ಕುವೆಂಪು ಅವರ ಅಧ್ಯಾಪನ ಹಾಗೂ ಮಾರ್ಗದರ್ಶನದಿಂದ ಪ್ರಭಾವಿತರಾಗಿ ಕೊನೆಯ ದಿನಗಳವರೆಗೂ ಕನ್ನಡ ಹಾಗೂ ಕನ್ನಡತನವನೇ ಉಸಿರಾಡಿದವರು ದೇಜಗೌ ಎಂದು ಹೇಳಿದರು.

‘ಗೋಕಾಕ್ ಚಳವಳಿಯ ಪ್ರಮುಖರಲ್ಲಿ ಒಬ್ಬರಾಗಿ ನಾಡಿನ ಗಮನ ಸೆಳೆದವರು ದೇಜಗೌ. ತೊಂಬತ್ತರ ಇಳಿವಯಸ್ಸಿನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗಬೇಕು ಎಂದು ಅದಕ್ಕಾಗಿ ಅಮರಣಾಂತ ಉಪವಾಸ ಕೈಗೊಂಡವರು. ಕನ್ನಡಕ್ಕೆ ಎಲ್ಲೇ ಅನ್ಯಾಯವಾದರೂ ಹೋರಾಟಕ್ಕೆ ಸಿದ್ಧರಾಗುತ್ತಿದ್ದರು’ ಎಂದರು.

ಹಿರಿಯ ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ ಮಾತನಾಡಿ ‘ದೇಜಗೌ ಅವರಿಗೆ ಕುವೆಂಪು ಕನ್ನಡ ಎಂದರೇ ಉಚ್ವಾಸ ನಿಶ್ವಾಸದಂತಿತ್ತು. ಸದಾ ಕನ್ನಡದ ಏಳಿಗೆಗಾಗಿ ಹಂಬಲಿಸುತ್ತಿದ್ದರು’ ಎಂದು ಹೇಳಿದರು.

ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಮಾತನಾಡಿದರು. ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ, ಬೇರು ಫೌಂಡೇಷನ್ ಅಧ್ಯಕ್ಷರಾದ ಮಧು ಪೂಜಾರ್, ಪ್ರಧಾನ ಕಾರ್ಯದರ್ಶಿಗಳಾದ ಜೈ ಅರ್ಜುನ್, ಎನ್‌.ಬಸಪ್ಪ, ಕನ್ನಡ ಚಳವಳಿ ಮುಖಂಡರಾದ ಬಿ.ಶಿವಶಂಕರ್, ವಿಜಯ್ ಕುಮಾರ್, ಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು