ಶನಿವಾರ, ಸೆಪ್ಟೆಂಬರ್ 25, 2021
22 °C
ಉಚ್ಚಗಣಿ ದೇವಾಲಯ ತೆರವು ನಂತರ ಭುಗಿಲೆದ್ದ ಪ್ರತಿರೋಧ l ದೇಗುಲಗಳ ಮರುಸಮೀಕ್ಷೆಗೆ ನಿರ್ಧಾರ

‌ದೇಗುಲ ತೆರವಿಗೆ ಜಿಲ್ಲಾಡಳಿತ ತಾತ್ಕಾಲಿಕ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇಗುಲ ತೆರವಿನ ನಂತರ ಭುಗಿಲೆದ್ದ ಪ್ರತಿರೋಧಕ್ಕೆ ಬೆಚ್ಚಿದ ಜಿಲ್ಲಾಡಳಿತ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ.

2009ರಲ್ಲಿ ರೂಪಿಸಿರುವ ಪಟ್ಟಿಯಲ್ಲಿ ನಗರದಲ್ಲಿ ಒಟ್ಟು 96 ಧಾರ್ಮಿಕ ಕಟ್ಟಡಗಳಿದ್ದು, ಅವುಗಳನ್ನು ಮರುಸಮೀಕ್ಷೆ ಮಾಡುವ ಕೆಲಸ ಪಾಲಿಕೆಯ ಎಲ್ಲ 9 ವಲಯ ಕಚೇರಿಗಳಲ್ಲೂ ಆರಂಭವಾಗಿದೆ.

ಇದಕ್ಕೂ ಮುನ್ನ ಅಗ್ರಹಾರದ ನೂರೊಂದು ಗಣಪತಿ ಸೇರಿದಂತೆ ಇತರೆ ದೇಗುಲಗಳನ್ನು ತೆರವುಗೊಳಿಸುವ ದಿನಾಂಕವನ್ನು ಗೊತ್ತುಪಡಿಸಿ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇಗುಲ ತೆರವಾದ ನಂತರ ಪ್ರತಿರೋಧ ಎದುರಾಯಿತು. ಸುಪ್ರೀಂಕೋರ್ಟ್‌ ಆದೇಶವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೇ ತೆರವು ಮಾಡಲಾಗುತ್ತಿದೆ ಎಂಬ ಟೀಕೆಗಳೂ ಬಂದಿದ್ದವು. ಇದರಿಂದ ಮತ್ತೊಮ್ಮೆ ಪಟ್ಟಿಯನ್ನು ಮರುಸಮೀಕ್ಷೆ ಮಾಡಲು ಪಾಲಿಕೆ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.