ಶ್ವಾನಗಳ ದಾಳಿ; ಗಾಯಗೊಂಡ ಮಹಿಳೆ

ಶನಿವಾರ, ಮೇ 25, 2019
27 °C

ಶ್ವಾನಗಳ ದಾಳಿ; ಗಾಯಗೊಂಡ ಮಹಿಳೆ

Published:
Updated:
Prajavani

ಬಿಳಿಕೆರೆ: ಗ್ರಾಮದಲ್ಲಿ ಶ್ವಾನಗಳ ಗುಂಪೊಂದು ಮಹಿಳೆಯ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ಬುಧವಾರ ನಡೆದಿದೆ.

ಬಿಳಿಕೆರೆ ಗ್ರಾಮದ ನಿವಾಸಿ ಪುಟ್ಟನರಸಮ್ಮ (67) ಅಂದು ಬೆಳಿಗ್ಗೆ ತಮ್ಮ ಜಮೀನಿಗೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಸುಮಾರು 6-8 ಶ್ವಾನಗಳಿದ್ದ ಗುಂಪು ದಾಳಿ ನಡೆಸಿವೆ.

ಮಹಿಳೆಯ ಬಲಗೈಯನ್ನು ಸಂಪೂರ್ಣವಾಗಿ ಗಾಯಗೊಳಿಸಿದ್ದು, ಎಡಗೈಯ ಎರಡು ಬೆರಳುಗಳನ್ನು ಜಗಿದು ಹಾಕಿವೆ. ಈ ಸಂದರ್ಭದಲ್ಲಿ ಅಲ್ಲೆ ಇದ್ದ ಹುಡುಗರು ಶ್ವಾನಗಳ ಗುಂಪನ್ನು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಬಿಳಿಕೆರೆ ಪ್ರಾಥಮಿಕ ಕೇಂದ್ರದಲ್ಲಿ ಪ್ರಥಮಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ದಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಮಾಂಸದ ಅಂಗಡಿಗಳು ಬಿಸಾಡುತ್ತಿದ್ದ ತ್ಯಾಜ್ಯವನ್ನು ತಿನ್ನುತ್ತಿದ್ದ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು
ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !