ಸೋಮವಾರ, ಆಗಸ್ಟ್ 2, 2021
26 °C

ಮೈಸೂರು: ಕಾಡಾನೆ ದಾಳಿಗೆ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ಕಸಬಾ ಹೋಬಳಿ ಚಕ್ಕೋಡನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಬೆಳೆ ನಷ್ಟವಾಗಿದೆ.

ಗ್ರಾಮದ ಟಿ.ಲೋಕೇಶ್ ಅವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಬಾಳೆ, ಜೋಳ ಮತ್ತು ಶುಂಠಿ ಬೆಳೆಯನ್ನು ತುಳಿದು ನಾಶಪಡಿಸಿವೆ. 

‘ಸುಮಾರು ಎರಡು ಸಾವಿರ ಬಾಳೆ ಗಿಡಗಳು ಕಟಾವಿಗೆ ಬಂದಿದ್ದವು. ಶುಂಠಿ 3 ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಜಮೀನಿಗೆ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಹಾನಿಮಾಡಿವೆ. ಪಕ್ಕದ ಜಮೀನಿನ ಗುಡಿಸಲನ್ನು ಬೀಳಿಸಿದೆ. ಆನೆಗಳನ್ನು ಓಡಿಸುವುದು ಕಷ್ಟ. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ರೈತ ಟಿ.ಲೋಕೇಶ್‌ ತಿಳಿಸಿದರು.

ಈ ಬಗ್ಗೆ ವೀರನಹೊಸಳ್ಳಿ ವನ್ಯಜೀವಿ ವಲಯದ ಕಚೇರಿಗೆ ದೂರು ಕೊಟ್ಟಿದ್ದು, ವಲಯ ಅರಣ್ಯಾಧಿಕಾರಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು